ಪಾಟ್ನಾ :  ಲಾಲೂ ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಯಾದವ್ ಸೋಮವಾರ ರಾತ್ರಿಯಿಂದ  ಬೋದ್ ಗಯಾದ ಹೋಟೆಲ್ ಕೋಣೆಯಿಂದ ನಾಪತ್ತೆಯಾಗಿದ್ದಾರೆ.

ಲಾಲೂ ಪುತ್ರ ತೇಜ್ ಪ್ರತಾಪ್ ಯಾದವ್ ಅವರು ಐಶ್ವರ್ಯ ರಾಯ್ ಜೊತೆಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಇದಾದ ಬಳಿಕ ಕಾಣೆಯಾಗಿದ್ದಾರೆ.

ತೇಜ್ ಪ್ರತಾಪ್ ಯಾದವ್ ಅವರು ಲಾಲೂ ಪ್ರಸಾದ್ ಯಾದವ್ ಭೇಟಿಯಾಗಿ ಮಾತುಕತೆ ನಡೆಸಿದ್ದು, ಇದಾದ ಬಳಿಕ ಬೋದ್ ಗಯಾದ ಹೋಟೆಲ್ ನಲ್ಲಿ ತಂಗುವುದಾಗಿ ತೆರಳಿದ ತೇಜ್ ಪ್ರತಾಪ್ ಅಲ್ಲಿಂದ ರಾತ್ರಿಯಿಂದಲೇ ನಾಪತ್ತೆಯಾಗಿದ್ದಾರೆ. 

ಹೋಟೆಲ್ ಸಿಬ್ಬಂದಿ ಹೇಳಿದ  ಪ್ರಕಾರ ಫೋನ್ ನಲ್ಲಿ ಮಾತನಾಡುತ್ತಿದ್ದ ಅವರು ಹಿಂದಿನ ಬಾಗಿಲಿನಿಂದ ಭದ್ರತಾ ಸಿಬ್ಬಂದಿಗೂ ತಿಳಿಯದಂತೆ ತೆರಳಿದ್ದಾರೆ ಎನ್ನಲಾಗಿದೆ. 

ಲಾಲೂ ಪ್ರಸಾದ್ ಅವರು ತಮ್ಮ ಪುತ್ರನ ಬಳಿ ವಿಚ್ಛೇದನ ಅರ್ಜಿಯನ್ನು ಹಿಂಪಡೆಯುವಂತೆ ಮನವರಿಕೆ ಮಾಡಿದ್ದು, ಇದರಿಂದ ಸದ್ಯ ಅವರು ನಾಪತ್ತೆಯಾಗಿದ್ದಾರೆ ಎನ್ನಲಾಗುತ್ತಿದೆ. 

ಆರ್ ಜೆಡಿ ಮುಖಂಡೆಯಾದ ಚಂದ್ರಿಕಾ ರಾಯ್ ಅವರ ಪುತ್ರಿ ಐಶ್ವರ್ಯ ರಾಯ್ ಅವರೊಂದಿಗೆ ಲಾಲೂ ಪುತ್ರ ತೇಜ್ ಪ್ರತಾಪ್ ಅವರ ವಿವಾಹ ಕಳೆದ ಮೇ 12 ರಂದು ನಡೆದಿತ್ತು. ಮದುವೆ ನಡೆದು 6 ತಿಂಗಳಲ್ಲೇ ಇದೀಗ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.