ಅನಾರೋಗ್ಯದ ಹಿನ್ನೆಲೆಯಲ್ಲಿ ಸ್ವದೇಶಕ್ಕೆ ಬರಲು ಪ್ರಯತ್ನ | ಪಾಕ್‌ ಸೇನೆ, ಐಎಸ್‌ಐನಿಂದಲೇ ಕೊಲೆಯಾಗುವ ಬಗ್ಗೆ ಭೀತಿ | ಅನಾರೋಗ್ಯದಿಂದ ಇರುವ ದಾವೂದ್‌ಗೆ ಚಿಕಿತ್ಸೆ ಸಿಗದಿದ್ದರೆ ಬಹು ಅಂಗ ವೈಫಲ್ಯ ಸಂಭವ | ಜೀವ ಸಹಿತ ದೇಶಕ್ಕೆ ಬಂದರೆ ಪಾಕ್‌ ಸೇನೆ, ನಾಯಕರ ದ್ವಂದ್ವ ಬಯಲಿಗೆ? | ರೂ. .15 ಸಾವಿರ ಕೋಟಿ ಮೌಲ್ಯದ ಬೇನಾಮಿ ಆಸ್ತಿ ವಿರುದ್ಧದ ಕ್ರಮ ಪ್ರಗತಿಯಲ್ಲಿ
ಒಂದು ವೇಳೆ ಆತ ಮರಳಿದರೆ ಪಾಕಿಸ್ತಾನದ ಸೇನೆ ಮತ್ತು ರಾಜಕೀಯ ನಾಯಕರ ದ್ವಂದ್ವ ನಿಲುವು ಬಯಲು ಮಾಡಲು ಸಾಧ್ಯವಿದೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಕೇಂದ್ರ ಸರ್ಕಾರ ಯುಇಎ ಮೇಲೆ ಒತ್ತಡ ಹಾಕಿದ್ದರಿಂದ .10 ಸಾವಿರದಿಂದ .15 ಸಾವಿರ ಕೋಟಿ ಮೌಲ್ಯದಷ್ಟುದಾವೂದ್ ಇಬ್ರಾಹಿಂ ಹೊಂದಿರುವ ಬೇನಾಮಿ ಆಸ್ತಿ ಮೇಲೆ ಕಾನೂನು ಕ್ರಮ 2015ರಿಂದ ಆರಂಭವಾಗಿದೆ. ಏಳು ತಿಂಗಳಿನಿಂದ ಈಚೆಗೆ ಅದರ ಬಗ್ಗೆ ಆ ಕಾರ್ಯವೂ ಪ್ರಗತಿಯಲ್ಲಿದೆ. ಯುಎಇ ಕೈಗೊಂಡ ಕ್ರಮದಿಂದಾಗಿ ಪಾಕಿಸ್ತಾನಕ್ಕೆ ತೀವ್ರ ಅಸಮಾಧಾನ ಉಂಟಾಗಿದೆ ಎಂದು ಪತ್ರಿಕೆ ತನ್ನ ವರದಿಯಲ್ಲಿ ಹೇಳಿಕೊಂಡಿದೆ.
ಪಾಕಿಸ್ತಾನ ಸೇನೆ ಮತ್ತು ಐಎಸ್ಐನಿಂದಲೇ ಕೊಲ್ಲಲ್ಪಡುವ ಬಗ್ಗೆ ಭೂಗತ ಪಾತಕಿಗೆ ಭಯ ಇದ್ದೇ ಇದೆ. ವಿಶ್ವಸಂಸ್ಥೆಯಿಂದ ಜಾಗತಿಕ ಭಯೋತ್ಪಾದಕ ಎಂದು ಘೋಷಣೆಗೆ ಒಳಗಾದ ಬಳಿಕ ದಾವೂದ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಕ್ ಸರ್ಕಾರದ ವಿರುದ್ಧ ಒತ್ತಡ ಹೆಚ್ಚುತ್ತಿದೆ. ಅನಾರೋಗ್ಯದಿಂದ ಬಳಲುತ್ತಿರುವ ಭೂಗತ ಪಾತಕಿಗೆ ಸೂಕ್ತ ಚಿಕಿತ್ಸೆ ದೊರಕದೇ ಇದ್ದಲ್ಲಿ ಆತ ಬಹುಅಂಗ ವೈಫಲ್ಯದಿಂದ ಅಸುನೀಗುವ ಸಾಧ್ಯತೆ ಹೆಚ್ಚು. ಅನಾರೋಗ್ಯಕ್ಕೆ ಒಳಗಾಗಿದ್ದರೂ ನೆರೆಯ ರಾಷ್ಟ್ರದಲ್ಲಿ ಆತನಿಗೆ ಸಹಾಯ ಮಾಡುವ ಪ್ರಭಾವ ಶಾಲಿಗಳು ಇದ್ದಾರೆ ಎಂದು ಅದು ತನ್ನ ವರದಿಯಲ್ಲಿ ಹೇಳಿಕೊಂಡಿದೆ.
ದೇಶದ ಗುಪ್ತಚರ ಸಂಸ್ಥೆಗಳು ನಕಲಿ ಪಾಸ್ಪೋರ್ಟ್ ಮೂಲಕ ದಾವೂದ್ ಇಬ್ರಾಹಿಂ ಬೇರೆ ದೇಶಕ್ಕೆ ತೆರಳುವ ಪ್ರಯತ್ನ ಮಾಡುತ್ತಿದ್ದಾನೆಯೇ ಎಂಬ ಬಗ್ಗೆ ನಿಗಾ ಇರಿಸಿವೆ
