ನವದೆಹಲಿ(ಸೆ.04): ಕಳೆದ ಅಧಿವೇಶನದಲ್ಲಿ ಜಾರಿಗೆ ಬಂದ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ತಿದ್ದುಪಡಿ ಕಾಯ್ದೆ, 2019 ಅನ್ವಯ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸೇರಿದಂತೆ ನಾಲ್ವರನ್ನು ಉಗ್ರ ಪಟ್ಟಿಗೆ ಸೇರಿಸಲಾಗಿದೆ.

ಯುಎಪಿಎ ಕಾಯ್ದೆಯಡಿಯಲ್ಲಿ ದಾವೂದ್ ಇಬ್ರಾಹಿಂ, ಹಫೀಜ್ ಸಯೀದ್, ಜಾಕೀರ್ ಉರ್ ರೆಹಮಾನ್ ಲಖ್ವಿ ಹಾಗೂ ಮಸೂದ್ ಅಜರ್'ನನ್ನು ಉಗ್ರ ಪಟ್ಟಿಗೆ ಸೇರಿಸಲಾಗಿದೆ.

ಈ ಮೊದಲು ಯುಎಪಿಎ ಕಾನೂನಿನಡಿಯಲ್ಲಿ ಕೇವಲ ಸಂಸ್ಥೆ ಅಥವಾ ಸಂಘಟನೆಗಳನ್ನಷ್ಟೇ ಉಗ್ರ ಸಂಘಟನೆಗಳೆಂದು ಘೋಷಿಸಲು ಅವಕಾಶವಿತ್ತು. ಆದರೆ ತಿದ್ದುಪಡಿ ಕಾನೂನಿ ಪ್ರಕಾರ ವ್ಯಕ್ತಿಯನ್ನೂ ಕೂಡ ಉಗ್ರ ಎಂದು ಘೋಷಿಸುವ ಅವಾಕಾಶವಿದೆ.