Asianet Suvarna News Asianet Suvarna News

ಪಾಕಿಸ್ತಾನದಲ್ಲೂ ನಮ್ ದಾವಣಗೆರೆ ಕೋತಿ ಫುಲ್ ಫೇಮಸ್ಸು!

ಪಾಕಿಸ್ತಾನ ರಾಜಕೀಯದಲ್ಲಿ  ನಮ್ಮ ದಾವಣಗೆರೆಯ ಕೋತಿ ಫುಲ್ ಫೇಮಸ್ ಆಗಿದೆ. ಅದಕ್ಕೆ ಕಾರಣವೇನು ಗೊತ್ತೆ.?

Davanagere Monkey Makes Sound In Pakistan Politics
Author
Bengaluru, First Published Oct 9, 2018, 12:10 PM IST
  • Facebook
  • Twitter
  • Whatsapp

ಇಸ್ಲಾಮಾಬಾದ್: ಇತ್ತೀಚೆಗೆ ಕರ್ನಾಟಕದ ದಾವಣಗೆರೆ ಯಲ್ಲಿ ಬಸ್‌ಚಾಲಕನೊಬ್ಬ ಮಂಗನ ಕೈಗೆ ಬಸ್‌ನ ಸ್ಟೇರಿಂಗ್ ಕೊಟ್ಟು ಕುಳಿತ  ವಿಡಿಯೋವೊಂದು ಭಾರೀ ವೈರಲ್ ಆಗಿತ್ತು. 

ಈ ವಿಡಿಯೋವನ್ನು ಮುಂದಿಟ್ಟು ಕೊಂಡು ಪಾಕಿಸ್ತಾನದ ಮೌಲಾನಾ ಫಜ್ಲುಲ್ ರೆಹಮಾನ್ ಎಂಬ ರಾಜಕಾರಣಿ, ಪ್ರಧಾನಿ ಇಮ್ರಾನ್ ಖಾನ್‌ಗೆ ಟಾಂಗ್ ಕೊಟ್ಟಿದ್ದಾರೆ. ಕಾರ್ಯಕ್ರಮವೊಂದ ರಲ್ಲಿ ಮಾತನಾಡಿದ ಫಜ್ಲುಲ್ ‘ಇತ್ತೀಚೆಗೆ ವಿಡಿಯೋ ವೊಂದನ್ನು ನೋಡಿದೆ. 

ಅದರಲ್ಲಿ ಬಸ್ ಚಾಲಕ, ಮಂಗ ನ  ಕೈಗೆ ಸ್ಟೇರಿಂಗ್ ಕೊಟ್ಟಿದ್ದ. ಆದರೆ ಹಿಂದೆ ತಾನೇ ಕುಳಿತುಕೊಂಡು ಬಸ್ ಓಡಿಸುತ್ತಿದ್ದ. ಆದರೆ ಮಂಗ, ತಾನೇ ಬಸ್ ಓಡಿಸುತ್ತಿದ್ದೇನೆ ಎಂಬ ಭ್ರಮೆಯಲ್ಲಿತ್ತು. ಇಲ್ಲಿಯೂ ಹೀಗೆ ಆಗಿರುವುದನ್ನು ನೀವು ನೋಡಿರಬ ಹುದು ಎಂದು ವ್ಯಂಗ್ಯವಾಡಿದ್ದಾರೆ. 

ಈ ಮೂಲಕ, ಪಾಕಿಸ್ತಾನದಲ್ಲಿ ಇಮ್ರಾನ್ ಪ್ರಧಾನಿಯಾಗಿದ್ದರೂ, ಅವರ ಹಿಂದೆ ಕುಳಿತುಕೊಂಡು ಸೇನೆ ಸರ್ಕಾರ ನಡೆಸುತ್ತಿದೆ ಎಂದು ಟಾಂಗ್ ನೀಡಿದ್ದಾರೆ.

Follow Us:
Download App:
  • android
  • ios