ನವದೆಹಲಿ(ಮಾ.10):  ಲೋಕಸಭಾ ಮಹಾ ಸಮರಕ್ಕೆ ಇಂದೇ ಮುಹೂರ್ತ ಫಿಕ್ಸ್ ಆಗಲಿದ್ದು, ಇಂದು ಸಂಜೆ 5 ಗಂಟೆಗೆ ಚುನಾವಣಾ ಆಯೋಗದಿಂದ ಸುದ್ದಿಗೋಷ್ಠಿ ನಡೆಯಲಿದೆ.

ದೆಹಲಿಯ ವಿಜ್ಞಾನ ಭವದಲ್ಲಿ ಚುನಾವಣಾ ಆಯೋಗದಿಂದ ಸುದ್ದಿಗೋಷ್ಠಿ ನಡೆಯಲಿದ್ದು, ದೇಶಾದ್ಯಂತ 8 ಅಥವಾ 9 ಹಂತದಲ್ಲಿ ಚುನಾವಣೆ ನಡೆಸಲು ಆಯೋಗ ಸಿದ್ಧತೆ ನಡೆಸಿದೆ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯುವ ಸಾಧ್ಯತೆ ಇದ್ದು, ದಿನಾಂಕ ಘೋಷಣೆಯಾದ ಕ್ಷಣದಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ.
2014ರ ಹಿನ್ನೋಟ:

2014ರಲ್ಲಿ 9 ಹಂತದಲ್ಲಿ ಏಪ್ರಿಲ್ 7 ರಿಂದ ಮೇ 12ರವರೆಗೆ ಚುನಾವಣೆ ನಡೆದಿತ್ತು. ಕರ್ನಾಟಕದಲ್ಲಿ ಏಪ್ರಿಲ್ 17ರಂದು ಒಂದೇ ಹಂತದಲ್ಲಿ ಮತದಾನವಾಗಿತ್ತು. ಈ ಬಾರಿಯೂ ರಾಜ್ಯದಲ್ಲಿ ಒಂದೇ ಹಂತದ ಮತದಾನದ ದಿನ ನಿಗದಿಯಾಗುವ ಸಾಧ್ಯತೆ ಇದೆ.