ದಸರಾ ರಜೆಯನ್ನು 4 ದಿನಗಳ ಕಾಲ ಕಡಿತಗೊಳಿಸಿ ರಾಜ್ಯ ಸರ್ಕಾರ ಆದೇಶ

ಬೆಂಗಳೂರು(ಸೆ.20): ಈ ಬಾರಿಯ ದಸರಾ ರಜೆಯನ್ನು 4 ದಿನಗಳ ಕಾಲ ಕಡಿತಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಇಂದು ಬೆಂಗಳೂರಿನಲ್ಲಿ ಸುವರ್ಣನ್ಯೂಸ್​ಗೆ ಸ್ಪಷ್ಟನೆ ನೀಡಿರುವ ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವ ತನ್ವೀರ್​ ಸೇಠ್​, ರಾಜ್ಯದಲ್ಲಿ ಕಾವೇರಿ ಗಲಭೆ ಹಿನ್ನೆಲೆಯಲ್ಲಿ ಈಗಾಗಲೇ 9 ದಿನ ರಜೆ ಘೋಷಿಸಿದ್ದೇವೆ. ಹೀಗಾಗಿ, ಈ ಬಾರಿಯ ಶೈಕ್ಷಣಿಕ ಪಠ್ಯಗಳು ಪೂರ್ಣವಾಗಿಲ್ಲ. ಇನ್ನು ದಸರಾ ರಜೆಯನ್ನು ಮುಂದಿನ ತಿಂಗಳು 8 ರಿಂದ 27ರವರೆಗೂ ನೀಡಲು ಮುಂಚೆಯೇ ನಿರ್ಧರಿಸಿದ್ವೀ. ಆದ್ರೆ ಇದೀಗ ರಜೆಯನ್ನು 8 ರಿಂದ 23ರವರೆಗೆ ಮಾತ್ರ ನೀಡಲು ಸರ್ಕಾರ ಕ್ರಮ ತೆಗೆದುಕೊಂಡಿದ್ದು, 4 ದಿನ ದಸರಾ ಕಡಿತವಾಗಿದೆ. ಇನ್ನು ಈಗಾಗಲೇ ಕೆಲ ಶಾಲೆಗಳು ಶನಿವಾರದಂದು ಪೂರ್ಣ ಕೆಲಸ ಮಾಡುತ್ತಿದೆ. ಆದ್ರೂ ಕೂಡ ದಸರಾ ರಜೆಯನ್ನು 4 ದಿನ ಕಡಿತಗೊಳಿಸಲಾಗಿದ್ದು, ಮುಂದಿನ ತಿಂಗಳು 23ರಿಂದ ಶಾಲೆಗಳು ಆರಂಭವಾಗಲಿದೆ ಎಂದು ಸ್ಪಷ್ಟ ಪಡಿಸಿದ್ದಾರೆ.