Asianet Suvarna News Asianet Suvarna News

ನೌಕರರಿಗೆ ದಸರಾ ಉಡುಗೊರೆ ಕೊಟ್ಟ ರಾಜ್ಯ ಸರ್ಕಾರ

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಾಜ್ಯ ಸರ್ಕಾರಿ ನೌಕರರಿಗೆ ದಸರಾ ಹಬ್ಬದ ಸಿಹಿ ಸುದ್ದಿ ನೀಡಿದೆ.

Dasara Gift HD Kumaraswamy Government hikes dearness allowance for employees
Author
Bengaluru, First Published Oct 13, 2018, 7:59 AM IST

ಬೆಂಗಳೂರು, [ಅ.13]: ರಾಜ್ಯ ಸರ್ಕಾರವು ಸರ್ಕಾರಿ ನೌಕರರಿಗೆ ದಸರಾ ಉಡುಗೊರೆ ಘೋಷಿಸಿದ್ದು, ಜುಲೈ 1ರಿಂದ ಪೂರ್ವಾನ್ವಯವಾಗುವಂತೆ ತುಟ್ಟಿಭತ್ಯೆ (ಡಿ.ಎ.) ದರವನ್ನು ಮೂಲ ವೇತನದ ಶೇ.1.75ರಿಂದ ಶೇ.3.75ಕ್ಕೆ ಹೆಚ್ಚಳ ಮಾಡಿ ಮಂಜೂರು ಮಾಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಸರ್ಕಾರದ ನೌಕರರು, ನಿವೃತ್ತಿ ವೇತನದಾರರು, ಕುಟುಂಬ ನಿವೃತ್ತಿ ವೇತನದಾರರಿಗೆ ಮತ್ತು ರಾಜ್ಯದ ಸಂಚಿತ ನಿಧಿಯಿಂದ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನ ಪಡೆಯುತ್ತಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತ ನೌಕರರಿಗೆ ಅನ್ವಯವಾಗುವಂತೆ ಹಾಲಿ ಇರುವ ತುಟ್ಟಿಭತ್ಯೆ ಹೆಚ್ಚಳ ಮಾಡಲಾಗಿದೆ.

2006ರ ಪರಿಷ್ಕೃತ ಯುಜಿಸಿ, ಐಸಿಎಆರ್‌ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿದ್ದ ಹಾಗೂ 2016ರ ಜ.1ರ ಪೂರ್ವದಲ್ಲಿ ನಿವೃತ್ತರಾದ ಪಿಂಚಣಿದಾರರಿಗೆ ಕೂಡ ಈ ಸೌಲಭ್ಯ ಅನ್ವಯವಾಗಲಿದೆ.

Follow Us:
Download App:
  • android
  • ios