ಬಿಬಿಎಂಪಿ ನಾಯಿ ನಿಯಮ ಗೇಲಿ ಮಾಡಿದ ಡ್ಯಾನಿಶ್..!

Danish Sait hits out BBMP's new dog rule
Highlights

ಬಿಬಿಎಂಪಿ ನೂತನ ನಾಯಿ ನಿಯಮ ಪ್ರಶ್ನಿಸಿದ ಡ್ಯಾನಿಶ್

ಎರಡನೇ ನಾಯಿ ಎಲ್ಲಿ ಬಚ್ಚಿಡಬೇಕು ಎಂದು ಪ್ರಶ್ನಿಸಿದ ನಟ

ನಗರದ ಇತರ ಜ್ವಲಂತ ಸಮಸ್ಯೆಗಳತ್ತ ಗಮನಹರಿಸುವಂತೆ ಸಲಹೆ

 

ಬೆಂಗಳೂರು(ಜೂ.8): ನಗರ ವ್ಯಾಪ್ತಿಯಲ್ಲಿ ಒಂದಕ್ಕಿಂತ ಹೆಚ್ಚು ಸಾಕುನಾಯಿಗಳನ್ನು ಹೊಂದಿದ್ದರೆ ಒಂದು ನಾಯಿಯನ್ನು ವಶಕ್ಕೆ ಪಡದುಕೊಳ್ಳಲಾಗುವುದು ಎಂಬ ಬಿಬಿಎಂಪಿ ನಿಯಮವನ್ನು ಸ್ಯಾಂಡಲ್ ವುಡ್ ನಟ ಡ್ಯಾನಿಶ್ ಸೇಠ್ ವಿರೋಧಿಸಿದ್ದಾರೆ. ಒಂದಕ್ಕಿಂತ ಹೆಚ್ಚು ನಾಯಿಗಳಿದ್ದರೆ ಮತ್ತೊಂದನ್ನು ಎಲ್ಲಿ ಬಚ್ಚಿಡುವುದು ಎಂದು ಅವರು ಪ್ರಶ್ನಿಸಿದ್ದಾರೆ.

ಬಿಬಿಎಂಪಿ ಇಂತಹ ನಿರ್ಣಯಗಳನ್ನು ಏಕೆ ತೆಗೆದುಕೊಳ್ಳುತ್ತದೆ ಎಂಬುದು ಗೊತ್ತಿಲ್ಲ ಎಂದಿರುವ ಡ್ಯಾನಿಶ್, ಇದರ ಬದಲು ಬೆಂಗಳೂರಿನ ಬೇರೆ ಸಮಸ್ಯೆಗಳತ್ತ ಬಿಬಿಎಂಪಿ ಗಮನಹರಿಸುವುದು ಒಳ್ಳೆಯದು ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಅಪ್ಲೋಡ್ ಮಾಡಿದ್ದಾರೆ.

ಸಾಕುನಾಯಿಗಳ ಬೊಗಳುವ ಶಬ್ದಕ್ಕಿಂತ ಕೆಲವರ ಶಬ್ದ ಅಸಹನೀಯವಾಗಿದ್ದು, ನಮ್ಮ ಸುತ್ತಮುತ್ತಲಿನ ಸಮಸ್ಯೆಗಳನ್ನು ಬಗೆಹರಿಸಲು ನಾಗರಿಕರು ಮುಂದಾಗಬೇಕು ಎಂದು ಡ್ಯಾನಿಶ್ ಸಲಹೆ ನೀಡಿದ್ದಾರೆ. ಬಿಬಿಎಂಪಿಯ ಈ ನಿರ್ಧಾರ ಕೆಲವು ವಿಶಿಷ್ಟ ತಳಿಯ ನಾಯಿಗಳಿಗೆ ಅನ್ವಯವಾಗುವುದಿಲ್ಲ ಎಂಬ ನಿಯಮವನ್ನೂ ಪ್ರಶ್ನಿಸಿರುವ ಡ್ಯಾನಿಶ್, ಹಾಗಾದರೆ ಈ ತಳಿಯ ನಾಯಿಗಳನ್ನು ಹೊರತುಪಡಿಸಿ ಉಳಿದವುಗಳನ್ನು ನಾವೇನು ಫ್ಯಾನ್ಸಿ ಡ್ರೆಸ್ ಹಾಕಿಸಿ ಬಚ್ಚಿಡಬೇಕೆ ಎಂದು ಪ್ರಶ್ನಿಸಿದ್ದಾರೆ.

loader