Asianet Suvarna News Asianet Suvarna News

ಬೆಂಗಳೂರಿಗರೆ ಎಚ್ಚರ – ನೀವು ತಿನ್ನೋ ತರಕಾರಿ ಸಾವು ತರಬಹುದು..!

ಸಿಲಿಕಾನ್ ಸಿಟಿಯ ಮಂದಿ ಎಚ್ಚರವಾಗಿರಿ. ನೀವೂ ತಿನ್ನೋ ತರಕಾರಿ ವಿಷಕಾರಿ ಆಗಿದೆ. ಪ್ರತಿಷ್ಠಿತ ಆಸ್ಪತ್ರೆ ನಿಮ್ಹಾನ್ಸ್ ವೈದ್ಯರ ವರದಿ ಈ ಬಗ್ಗೆ ಮಾಹಿತಿಯನ್ನು ನೀಡಿದೆ. ವೃಷಭಾವತಿಯ ಕೊಳಚೆ ನೀರಿನಲ್ಲಿ ಬೆಳೆದ ತರಕಾರಿ ಸೇವಿಸಿದವರ ಮಕ್ಕಳಲ್ಲಿ ಶೇ 8ರಷ್ಟು ಮಂದಿ ಬುದ್ಧಿಮಾಂಧ್ಯತೆಗೆ ತುತ್ತಾಗುತ್ತಿರುವ ಆಘಾತಕಾರಿ ಸಂಗತಿಯು ಸಂಶೋಧನೆಯಿಂದ  ಬಯಲಾಗಿದೆ.

Dangerous Vegetables sale in Bengaluru

ಬೆಂಗಳೂರು (ಜ.2): ಸಿಲಿಕಾನ್ ಸಿಟಿಯ ಮಂದಿ ಎಚ್ಚರವಾಗಿರಿ. ನೀವೂ ತಿನ್ನೋ ತರಕಾರಿ ವಿಷಕಾರಿ ಆಗಿದೆ.  ಪ್ರತಿಷ್ಠಿತ ಆಸ್ಪತ್ರೆ ನಿಮ್ಹಾನ್ಸ್ ವೈದ್ಯರ ವರದಿ ಈ ಬಗ್ಗೆ ಮಾಹಿತಿಯನ್ನು ನೀಡಿದೆ. ವೃಷಭಾವತಿಯ ಕೊಳಚೆ ನೀರಿನಲ್ಲಿ ಬೆಳೆದ ತರಕಾರಿ ಸೇವಿಸಿದವರ ಮಕ್ಕಳಲ್ಲಿ ಶೇ 8ರಷ್ಟು ಮಂದಿ ಬುದ್ಧಿಮಾಂಧ್ಯತೆಗೆ ತುತ್ತಾಗುತ್ತಿರುವ ಆಘಾತಕಾರಿ ಸಂಗತಿಯು ಸಂಶೋಧನೆಯಿಂದ  ಬಯಲಾಗಿದೆ.

ಕೊಳಚೆ ನೀರು, ರಾಸಾಯನಿಕಯುಕ್ತ ನೀರು ಬಳಸಿ ನಗರದ ಹೊರವಲಯದಲ್ಲಿ ಬೆಳೆಯುತ್ತಿರುವ ಸೊಪ್ಪು , ತರಕಾರಿ ಹಾಗೂ ಹಣ್ಣು ಮನುಷ್ಯನ ಆರೋಗ್ಯಕ್ಕೆ ಹಾನಿಕಾರಕ ಎಂಬ ಮಾತುಗಳು ಮೊದಲಿನಿಂದಲೂ ಕೇಳಿ ಬರುತ್ತಿದ್ದವು.  ನಾಯಂಡಹಳ್ಳಿ ಸುತ್ತಮುತ್ತಲಿನ ಕಾರ್ಖಾನೆಗಳ ಸತು, ಪಾದರಸ, ಕ್ಯಾಡ್ಮಿಯಂ, ಕ್ರೋಮಿಯಂ ಸೇರಿದಂತೆ ಇತರೆ ವಿಷಕಾರಿ ರಾಸಾಯನಿಕಗಳನ್ನು ನೇರವಾಗಿ ವೃಷಭಾವತಿ ಕಾಲುವೆಗೆ ಹರಿಬಿಡಲಾಗುತ್ತಿದೆ . ಇದೇ ನೀರು ಬಳಸಿಕೊಂಡು ರೈತರು  ತರಕಾರಿ ಬೆಳೆಯುತ್ತಿದ್ದಾರೆ. ಇದರಿಂದ  ವಿಷಕಾರಿ ಅಂಶ ಪತ್ತೆಯಾಗಿದೆ ಎಂದು  ನಿಮ್ಹಾನ್ಸ್ ತಜ್ಞರು ನಡೆಸಿದ ಸಂಶೋಧನೆಯಿಂದ ತಿಳಿದುಬಂದಿದೆ.  ಇನ್ನು ಬಿಬಿಎಂಪಿ , ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ವರದಿ ಕೇಳಿದ್ದು,  ಸಂಬಂಧ ಪಟ್ಟ ಕೈಗಾರಿಕೆಗಳ ವಿರುದ್ಧ ಕ್ರಮಕ್ಕೆ ಸೂಚಿಸಿದೆ.

ಇನ್ನೂ ಗರ್ಭಿಣಿಯರು ಸತು,ಪಾದರಸ ಮತ್ತು ಇನ್ನಿತರೆ ವಿಷಕಾರಿ ರಾಸಾಯನಿಕ ಅಂಶವುಳ್ಳ ತರಕಾರಿ ಸೇವನೆ ಮಾಡುವುದರಿಂದ ಹುಟ್ಟುವ ಮಕ್ಕಳು ಬುದ್ಧಿಮಾಂದ್ಯರಾಗುತ್ತಿದ್ದಾರೆ.  ಅಲ್ಲದೆ ಬೆಂಗಳೂರಿನಿ ನಿವಾಸಿಗರಲ್ಲಿ ಕಿಡ್ನಿ ಸಮಸ್ಯೆ ಹೆಚ್ಚಾಗಿ ಕಂಡುಬರ್ತಿದೆ. ಹೀಗಾಗಿ ಸಿಲಿಕಾನ್ ಸಿಟಿ ಮಂದಿ ಆಹಾರ ಸೇವಿಸುವಾಗ  ಎಚ್ಚರ ವಹಿಸೋದು ಒಳಿತು.

Follow Us:
Download App:
  • android
  • ios