Asianet Suvarna News Asianet Suvarna News

ಹೆದ್ದಾರಿಯ ಬದಿಯಲ್ಲೇ ಇದೆ ಅಂಗನವಾಡಿ; ಮಕ್ಕಳ ಜೀವಕ್ಕಿಲ್ಲ ಇಲ್ಲಿ ಬೆಲೆ..!

ಒಂದೇ ಕೊಡಡಿಯಲ್ಲಿ ಮಕ್ಕಳಿಗೆ ಆಟ-ಪಾಠ-ಊಟ. ಪರ್ಯಾಯ ವ್ಯವಸ್ಥೆಗೆ ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಇದುವರೆಗೂ ಕ್ಯಾರೆ ಎಂದಿಲ್ವಂತೆ. ಇನ್ನೂ ಹೆದ್ದಾರಿಯಲ್ಲಿ ಓಡಾಡೋ ವಾಹನಗಳ ಅಬ್ಬರಕ್ಕೆ ಹೆದರಿರುವ ಅಂಗನವಾಡಿ ಕಾರ್ಯಕರ್ತೆ, ಪಕ್ಕದ ದೇವಸ್ಥಾನದಲ್ಲಿ ಮಕ್ಕಳಿಗೆ ಪಾಠ ಮಾಡುವ  ಅನಿವಾರ್ಯತೆ ಎದುರಾಗಿದೆ.

Danger State Highway Near Anaganavadi

ಗದಗ(ನ.11): ಚಿಕ್ಕ ಚಿಕ್ಕ ಮಕ್ಕಳನ್ನ ಅಂಗನವಾಡಿಗೆ  ಕಳಿಸೋ ಪೋಷಕರು ಖುಷಿಯಿಂದ ತಮ್ಮ ಮಕ್ಕಳು ಆಟ-ಪಾಠ ಕಲಿತುಕೊಂಡು ಬರ್ತಾರೆ ಅಂತ ಕಳಿಸ್ತಾರೆ.

ಆದರೆ ಗದಗ ಜಿಲ್ಲೆಯಲ್ಲಿರೋ ಒಂದು ಅಂಗನವಾಡಿಗೆ ಮಕ್ಕಳನ್ನ ಕಳಿಸೋಕೆ ಪೋಷಕರು ಭಯ ಪಡ್ತಿದ್ದಾರೆ. ಹೌದು, ಗದಗ ನಗರದ  ಬೆಟಗೇರಿಯಲ್ಲಿರುವ, ಗದಗದಿಂದ ಬಾಗಲಕೋಟೆಗೆ ಹೋಗುವ ರಾಜ್ಯ ಹೆದ್ದಾರಿಯ ಪಕ್ಕದಲ್ಲಿಯೇ ಅಂಗನವಾಡಿ ಕೇಂದ್ರವನ್ನ ಆರಂಭಿಸಲಾಗಿದೆ. ಅಲ್ಲದೇ ಮಕ್ಕಳಿಗೆ ಹಾಗೂ ಮಾತೃಪೂರ್ಣ ಯೋಜನೆಯ ತಾಯಂದಿರಿಗೆ ಅಲ್ಲಿಯೇ ಅಡುಗೆ ವ್ಯವಸ್ಥೆ ಕೂಡಾ ಮಾಡಲಾಗಿದೆ.

ಒಂದೇ ಕೊಡಡಿಯಲ್ಲಿ ಮಕ್ಕಳಿಗೆ ಆಟ-ಪಾಠ-ಊಟ. ಪರ್ಯಾಯ ವ್ಯವಸ್ಥೆಗೆ ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಇದುವರೆಗೂ ಕ್ಯಾರೆ ಎಂದಿಲ್ವಂತೆ. ಇನ್ನೂ ಹೆದ್ದಾರಿಯಲ್ಲಿ ಓಡಾಡೋ ವಾಹನಗಳ ಅಬ್ಬರಕ್ಕೆ ಹೆದರಿರುವ ಅಂಗನವಾಡಿ ಕಾರ್ಯಕರ್ತೆ, ಪಕ್ಕದ ದೇವಸ್ಥಾನದಲ್ಲಿ ಮಕ್ಕಳಿಗೆ ಪಾಠ ಮಾಡುವ  ಅನಿವಾರ್ಯತೆ ಎದುರಾಗಿದೆ. ಮಕ್ಕಳ ಶಿಕ್ಷಣಕ್ಕಾಗಿ ಸಾಕಷ್ಟು ಅನುದಾನ ನೀಡುವ ಸರ್ಕಾರ, ಹೆದ್ದಾರಿ ಪಕ್ಕದಲ್ಲೇ ಇರೋ ಅಂಗನವಾಡಿ ಬಗ್ಗೆ ಮಾತ್ರ ಗಮನ ಹರಿಸುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಇನ್ನಾದರೂ ಸ್ವಂತ ಕಟ್ಟಡ ನಿರ್ಮಾಣಕ್ಕೆ ಮುಂದಾಗಬೇಕು.  ಇಲ್ಲವೇ ಬೇರೆ ಕಟ್ಟಡಕ್ಕೆ ಅಂಗನವಾಡಿ ಕೇಂದ್ರ ಸ್ಥಳಾಂತರಿಸೋ ಮೂಲಕ ಮಕ್ಕಳ ‌ನೆಮ್ಮದಿಗೆ ಕಾರಣವಾಗಬೇಕು ಅನ್ನೋದು ನಗರದ ಜನ ಆಗ್ರಹವಾಗಿದೆ.

 

Follow Us:
Download App:
  • android
  • ios