ಗದಗ್‌ನಲ್ಲಿ ದಂಡುಪಾಳ್ಯ ಮಾದರಿಯಲ್ಲಿ ಕೊಲೆ ಮಾಡ್ತಿದ್ದ ಗ್ಯಾಂಗ್ ಪತ್ತೆ..!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 30, Oct 2018, 6:15 PM IST
Dandapalya model most notorious killers Gang arrested in Gadag
Highlights

ಒಂಟಿ ವೃದ್ದೆ ಮನೆಗೆ ನುಗ್ಗಿ ಕೊಲೆ ಮಾಡಿ ಚಿನ್ನಾಭರಣ ದೋಚುತ್ತಿದ್ದ ದಂಡುಪಾಳ್ಯ ಮಾಡದರಿಯ ಗ್ಯಾಂಗ್ ಪತ್ತೆಯಾಗಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ.

ಗದಗ, [ಅ.30]: ಗದಗನಲ್ಲಿ ಪೊಲೀಸರು ಇಂದು [ಮಂಗಳವಾರ] ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ದಂಡುಪಾಳ್ಯ ಮಾದರಿಯಲ್ಲಿ ಕೊಲೆ ಮಾಡ್ತಿದ್ದ ಗ್ಯಾಂಗ್ ಅನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಹಿಳೆ ಮತ್ತು ಮೂಗ ಸೇರಿ ಒಟ್ಟು 8 ಜನರ ಗ್ಯಾಂಗ್ ನಲ್ಲಿ 6 ಜನರನ್ನು ಗದಗ ಪೊಲೀಸರು ಬಂಧಿಸಿದ್ದಾರೆ. ಫೆ.4, 2017ರಲ್ಲಿ ವಿಮಲಾಬಾಯಿ ಹಾಗೂ ಮೇ.23.2018 ರಂದು ಸರೋಜಾ ಎಂಬ ವೃದ್ದೆಯರನ್ನ ಒಂದೇ ಮಾದರಿಯಲ್ಲಿ ಈ ಗ್ಯಾಂಗ್ ಕೊಲೆ ಮಾಡಿತ್ತು. 

ಒಂಟಿ ವೃದ್ದೆ ಮನೆಗೆ ನುಗ್ಗಿ ಕೊಲೆ ಮಾಡಿ ಚಿನ್ನಾಭರಣ ದೋಚುವುದೇ ಈ ಗ್ಯಾಂಗ್ ನ ಕಾಯಕವಾಗಿತ್ತು. ಧಾರವಾಡ ಜಿಲ್ಲೆ ಅಣ್ಣಿಗೇರಿ ಮೂಲದ ಶಂಕರಪ್ಪ, ಚಂದ್ರಪ್ಪ, ಉಮೇಶ, ಹುಬ್ಬಳ್ಳಿಯ ಸೆಟ್ಲಮೆಂಟ್ ಮೂಲದ ಮಾರುತಿ, ಮಣ್ಣಪ್ಪ, ಮೋಹನ್ ಬಂಧಿತ ಆರೋಪಿಗಳು. 

ಬಸಮ್ಮ ಮತ್ತು ಸುರೇಶ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. 2 ಕೊಲೆ ಜತೆಗೆ 10 ಕಳ್ಳತನ ಪ್ರಕರಣದಲ್ಲಿ ಈ ಗ್ಯಾಂಗ್ ಭಾಗಿಯಾಗಿದ್ದು,  ಬಂಧಿತರಿಂದ 500 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

loader