Asianet Suvarna News Asianet Suvarna News

ಬಾಲಿವುಡ್ ಹಾಡಿಗೆ ಯಕ್ಷಗಾನ ಮಿಕ್ಸ್, ವಾಹಿನಿಗೆ ಅಭಿಮಾನಿಗಳ ಫುಲ್ ಕ್ಲಾಸ್

ಖಾಸಗಿ ಮನರಂಜನಾ ವಾಹಿನಿಯ ರಿಯಾಲಿಟಿ ಶೋ ವೊಂದರಲ್ಲಿ ಯಕ್ಷಗಾನಕ್ಕೆ ಮಾಡಿರುವ ಅಪಮಾನಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಬಾಲಿವುಡ್ ಹಾಡೊಂದಕ್ಕೆ ಯಕ್ಷಗಾನದ ನೃತ್ಯವನ್ನು ಬಳಸಿಕೊಂಡಿರುವ ಬಗ್ಗೆ ವಾಹಿನಿ ಕ್ಷಮೆ ಯಾಚಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ. ಹಿಂದೊಮ್ಮೆ ಬ್ರಾಹ್ಮಣರನ್ನು ಕೆಟ್ಟದ್ದಾಗಿ ಚಿತ್ರಿಸಿದ್ದ ವಾಹಿನಿ ನಂತರ ಕ್ಷಮೆಯಾಚಿಸಿತ್ತು.

Dance Show on TV Channel draws criticism over Yakshagana
Author
Bengaluru, First Published Jul 23, 2018, 6:28 PM IST

ಖಾಸಗಿ ಮನರಂಜನಾ ವಾಹಿನಿಯ ರಿಯಾಲಿಟಿ ಶೋ ವೊಂದರಲ್ಲಿ ಯಕ್ಷಗಾನಕ್ಕೆ ಮಾಡಿರುವ ಅಪಮಾನಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಬಾಲಿವುಡ್ ಹಾಡೊಂದಕ್ಕೆ ಯಕ್ಷಗಾನದ ನೃತ್ಯವನ್ನು ಬಳಸಿಕೊಂಡಿರುವ ಬಗ್ಗೆ ವಾಹಿನಿ ಕ್ಷಮೆ ಯಾಚಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ. ಹಿಂದೊಮ್ಮೆ ಬ್ರಾಹ್ಮಣರನ್ನು ಕೆಟ್ಟದ್ದಾಗಿ ಚಿತ್ರಿಸಿದ್ದ ವಾಹಿನಿ ನಂತರ ಕ್ಷಮೆಯಾಚಿಸಿತ್ತು.

ಸಾಮಾಜಿಕ ತಾಣಗಳಾದ ಫೇಸ್ ಬುಕ್ ಮತ್ತು ಟ್ವಿಟರ್ ನಲ್ಲಿ ಯಕ್ಷಗಾನ ಅಭಿಮಾನಿಗಳು ವಾಹಿನಿಗೆ ಪ್ರಶ್ನೆಗಳ ಬಾಣ ಎಸೆದಿದ್ದಾರೆ. ನಿಮಗೆ ಯಕ್ಷಗಾನದಲ್ಲಿ ಯಾವ ರಾಗದ ಹಾಡು ಸಿಗಲಿಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.

ಯಕ್ಷಗಾನ ಅಭಿಮಾನಿಯೊಬ್ಬರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ವಾಹಿನಿಗೆ ಬಹಿರಂಗ ಸವಾಲು ಹಾಕಿದ್ದು  ಕ್ಷಮೆ ಕೇಳುವವರೆಗೂ ಬಿಡುವುದಿಲ್ಲ ಎಂದಿದ್ದಾರೆ..  ಈ ಪತ್ರವನ್ನು ನೀವು ಓದಿಕೊಂಡು ಬನ್ನಿ...

ಯಕ್ಷ ದಿಗ್ಗಜ ಚಿಟ್ಟಾಣಿ ರಾಮಚಂದ್ರ ಹೆಗಡೆ ಸಾಗಿದ ಜೀವನದ ಹಾದಿ

ಯಕ್ಷಗಾನ ಕಲಾವಿದರ ಮಗಳಾಗಿ ನನ್ನದೊಂದು ಕೋರಿಕೆ,,,
ನೀವಂದುಕೊಂಡಂತೆ ಯಕ್ಷಗಾನ ಅನ್ನೋದು ಬರೀ ಕಲೆಯಲ್ಲ ಕರಾವಳಿಗರ ಭಾವನೆ..! ಬರೀ ಯಕ್ಷಗಾನ ಕಾಸ್ಟ್ಯೂಮ್ ಹಾಕಿ ಮನಸಿಗೆ ಬಂದಂತೆ ಕುಣಿಯುವುದೇ ಯಕ್ಷಗಾನವಾಗಿದ್ದರೆ ಎಲ್ಲರೂ ಅದೇ ಮಾಡ್ತಿದ್ರು.. ಯಕ್ಷಗಾನದಲ್ಲೂ ತಿಟ್ಟುಗಳಿವೆ ಮಟ್ಟುಗಳಿವೆ ಶ್ರುತಿ, ಲಯ, ತಾಳ,ರಾಗಗಳಿವೆ, ರಂಗ ನಡೆಯಿದೆ, ಎಲ್ಲವೂ ಇದೆ..

ನಮಗಿದೆಷ್ಟು ಪವಿತ್ರವೆಂದರೆ, ರಜಸ್ವಲೆಯಾದವರು ಯಕ್ಷಗಾನಕ್ಕೆ ಹೋಗುವುದಿರಲಿ ದೂರದಿಂದ ಅಕಾಸ್ಮಾತ್ ಕಂಡರೂ ನೋಡಲಾರೆವು, ಮನೋಬಯಕೆ ಈಡೇರಲು ದೇವರಿಗೆ ಹರಕೆಯಾಗಿ ಯಕ್ಷಗಾನ ಸಲ್ಲಿಸುವೆವೆಂದು ಹರಕೆಯಾಗಿ ಹೇಳಿಕೊಳ್ತೇವೆ, ಕೋಲ, ಗಗ್ಗರ, ದೈವಾರಾಧನೆ ಹೇಗೋ ಯಕ್ಷಗಾನವೂ ನಮಗೆ ಹಾಗೆಯೇ..!! ಚೌಕಿಮನೆಗೆ ಚಪ್ಪಲಿ ಹಾಕಿ ಅಡಿ ಇಡಲಾರೆವು, ಶ್ರೀರಾಮ ಪಾತ್ರಧಾರಿ ರಂಗದಲ್ಲಿದ್ದರೆ ಅವನೊಳಗೇ ರಾಮನ ಕಂಡು ನಮಗರಿವಿಲ್ಲದೇ ಮನಸು ಆರಾಧಿಸುತ್ತದೆ, ಅಷ್ಟೇ ಯಾಕೆ ನಮ್ಮ‌ಕಲೆಯನ್ನು ದೇಶದ ಉದ್ದಗಲಕ್ಕೂ ಪಸರಿಸುತ್ತಲೇ ಇದ್ದೇವೆ... 50-100ಕ್ಕೂ ಹೆಚ್ಚಿನ ಮೇಳಗಳಲ್ಲಿ ಕಲಾವಿದರು ಸತತ ಆರು ತಿಂಗಳ‌ಕಾಲ ಕಲಾವಿದರೆಲ್ಲರು ಮನೆ ಬಿಟ್ಟು ಭಕ್ತಿಯಿಂದಲೇ ಬೆವರಿಳಿಸಿ ಇಂತಹ ಸುಮಧುರ ಕಲೆಯ ಪಸರಿಸುವಿಕೆಯಲ್ಲಿ ನಿರತರಾಗಿದ್ದರೆ ಅಲ್ಲೆಲ್ಲೋ ಏಸಿ ರೂಮಲ್ಲಿ ಕೂಳಿತು ಅದೆಷ್ಟು ಸುಲಭವಾಗಿ "ಮುಕ್ಕಾಲ್ಲಾ ಮುಕ್ಕಾಬುಲ್ಲಾ' ಅಂತ ಕುಣಿಸಿ ಕರಾವಳಿಗರ ಭಾವನೆಗೆ ಭರ್ಜಿ ಇಂದ ಇರಿದಿರಲ್ಲಾ, ಇದರಿಂದ ನೀವು ಸಾಧಿಸಿದ್ದಾದರೂ ಏನು..?? ಯಕ್ಷಗಾನವನೇ ಮಾಡಬೇಕಂದಿದ್ದರೇ ಅದೆಷ್ಟು ಚೆಂದದ ಪದ್ಯಗಳು ನಿಮಗೆ ಬೇಕಿತ್ತು, ನವರಸಗಳಲ್ಲಿ ಯಾವ ರಸದ ಪದ್ಯ ಬೇಕಿತ್ತು..?? ಅದೆಲ್ಲಾ ಬಿಟ್ಟು ಈ ತರದ ಹುಚ್ಚಾಟಗಳನು ಆಡಿದರೆ ಕಾರಾವಳಿಯಲ್ಲಿ ಯಾರೂ ಕೇಳುವವರಿಲ್ಲ ಎಂದೇ ಅಥವಾ ಏನು ಮಾಡಿದರೂ ಕರಾವಳಿಗರು ಸುಮ್ಮನೆ ಕೂರುವರು ಎಂದೇ..??

ತಪ್ಪು ಹೇಗೂ ಆಗಿದೆ ನಮ್ಮ ಭಾವನೆಗಳಿಗೆ ಘಾಸಿಗೊಳಿಸಿದ್ದಕ್ಕೆ, ಕಲೆಗೆ ಅಪಮಾನಿಸಿದ್ದಕ್ಕೆ ಕೊನೆಯಪಕ್ಷ ಕ್ಷಮೆಯಾದರೂ ಕೇಳುವಿರೆಂಬ ನಂಬಿಕೆಯಲ್ಲಿ ನಾವು...!!!

ಈ ಪತ್ರಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಬಂದವು.  ವಾಹಿನಿಯಿಂದ ಸೂಕ್ತ ಉತ್ತರ ಬಾರದ ಕಾರಣಕ್ಕೆ ಇನ್ನೊಂದು ಪತ್ರವನ್ನು ಬರೆದಿದ್ದಾರೆ..

ನಿಮ್ಮವರನ್ನ Contact ಮಾಡಿ ಮಾತಾಡಿದ್ರೆ ಈಗಾಗಲೇ ಕಂಪ್ಲೈಂಟ್ ರಿಜಿಸ್ಟರ್ ಆಗಿದೆ ಅದರ ಬಗ್ಗೆ Action ತಗೋಳ್ತೇವೆ ಅನ್ನೋ ಉತ್ತರ ಸಿಕ್ತು.. ಇದು ನಮ್ಮ ಸಮಾಧಾನಕ್ಕೆ ಹೇಳಿದ ಉತ್ತರ ಆಗದೇ ಇರ್ಲಿ ಎಂಬುದು ನಮ್ಮ ಆಶಯ ಒಂದು ವೇಳೆ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವವನಿಗೆ ನೂರು ವರ್ಷ ಆಯಸ್ಸು ಎಂಬ ನಡೆಯೇ ಆಗಿದ್ದಲ್ಲಿ ನೀವು ಗೊತ್ತಿದ್ದೇ ಮಾಡಿದ ತಪ್ಪಿದು ಎಂದು ಪರಿಗಣಿಸಬೇಕಾಗುತ್ತದೆ. ಅನಗತ್ಯವಾಗಿ ಜನರ ಮನಸಲ್ಲಿ ದ್ವೇಷದ ಭಾವನೆ ತುಂಬ ಬೇಡಿ, ಕಲೆಗಾದ ಅಪಮಾನವೇನೂ ಸಣ್ಣದಲ್ಲ... ಇದರ ಬಗ್ಗೆ ಸಾರ್ವಜನಿಕವಾಗಿ ಕ್ಷಮೆ ಕೇಳಿ, ಇನ್ನು ಮುಂದೆಯಾದರೂ ಕೂಡಾ ಕರ್ನಾಟಕದ ಅದ್ಯಾವುದೇ ಕಲಾ ಪ್ರಾಕಾರವಿರಲಿ ಅದರದೇ ಮೂಲ ರೂಪದಲ್ಲಿ ಪ್ರದರ್ಶಿಸುವುದೇ ಆದರೆ ಸಂತೋಷದ ವಿಷಯ, ಹೊರತಾಗಿ ನಿಮ್ಮ TRP ತೆವಲಿಗೆ ಕಲೆಯ ಮೂಲ ಸೊಬಗನ್ನ ಕೆಡಿಸಿದರೆ ಮುಂದಿನ ಪರಿಣಾಮ ಎದುರಿಸಲು ನೀವು ಸನ್ನದ್ಧರಾಗಬೇಕಾಗುತ್ತದೇ ಜನರೇ ಬುದ್ಧಿಕಲಿಸುತ್ತಾರೆ ಕಾರಣ ಜನರೇ ಒಂದು ಮಾಧ್ಯಮವೀಗ..!!

ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ

Follow Us:
Download App:
  • android
  • ios