ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಹೆಚ್ಚಿದೆ ದಲಿತ ದೌರ್ಜನ್ಯ

First Published 8, Apr 2018, 4:05 PM IST
Dalits facing atrocities in BJP ruled states after Bharat bandh
Highlights

ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ದಲಿತರು ಹೆಚ್ಚಿನ ಪ್ರಮಾಣದಲ್ಲಿ ದೌರ್ಜನ್ಯವನ್ನು ಎದುರಿಸುತ್ತಿದ್ದಾರೆ ಎಂದು ಬಿಎಸ್’ಪಿ ಮುಖಂಡೇ ಮಾಯಾವತಿ ಹೇಳಿದ್ದಾರೆ.

ನವದೆಹಲಿ : ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ದಲಿತರು ಹೆಚ್ಚಿನ ಪ್ರಮಾಣದಲ್ಲಿ ದೌರ್ಜನ್ಯವನ್ನು ಎದುರಿಸುತ್ತಿದ್ದಾರೆ ಎಂದು ಬಿಎಸ್’ಪಿ ಮುಖಂಡೇ ಮಾಯಾವತಿ ಹೇಳಿದ್ದಾರೆ.

ಭಾರತ್ ಬಂದ್ ಆದ ಬಳಿಕ ಇಂತಹ ಕೃತ್ಯಗಳು ಹೆಚ್ಚಾಗಿವೆ ಎಂದು ಮಾಯಾವತಿ ಹೇಳಿದ್ದಾರೆ. ಭಾರತ್ ಬಂದ್ ಹೆಚ್ಚಿನ ಪ್ರಮಾಣದಲ್ಲಿ ಯಶಸ್ವಿಯಾಗಿತ್ತು. ಇದರಿಂದ ಭಯಗೊಂಡ ಬಿಜೆಪಿ  ದಲಿತರ ಮೇಲೆ ದೌರ್ಜನ್ಯ ಎಸಗಲು ಆರಂಭಿಸಿದೆ ಎಂದು ಹೇಳಿದ್ದಾರೆ.

ಅಲ್ಲದೇ ಅನೇಕ ದಲಿತ ಮುಖಂಡರು ಹಾಗೂ ಅವರ ಕುಟುಂಬಸ್ಥರನ್ನೂ ಕೂಡ ಬಂಧಿಸಲಾಗಿದೆ ಎಂದು ಈ ವೇಳೆ ತಿಳಿಸಿದ್ದಾರೆ.

loader