ಸರ್ಕಾರಿ ಶಾಲೆಯಲ್ಲಿ ಅಡುಗೆಯ ಕೆಲಸ ಬಿಡಲು ನಿರಾಕರಿಸದ ದಲಿತ ಮಹಿಳೆಯನ್ನು ಹಾಗೂ ಆಕೆಯ ಮಗನನ್ನು ಗುಂಪೊಂದು ಥಳಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸರ್ಕಾರಿ ಶಾಲೆಯಲ್ಲಿ ಅಡುಗೆಯ ಕೆಲಸ ಬಿಡಲು ನಿರಾಕರಿಸಿದ ದಲಿತ ಮಹಿಳೆಯನ್ನು ಹಾಗೂ ಆಕೆಯ ಮಗನನ್ನು ಗುಂಪೊಂದು ಥಳಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪ್ರಭಾ ವಾಲಾ ಎಂಬ ಮಹಿಳೆ ಗುಜರಾತಿನ ಜೂನಾಗಢದ ಬಾಂಟಿಯಾ ಗ್ರಾಮದ ಶಾಲೆಯಲ್ಲಿ ಕಳೆದ 10 ವರ್ಷದಿಂದ ಬಿಸಿಯೂಟ ತಯಾರಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ದಲಿತ ಮಹಿಳೆಯೊಬ್ಬಳು ಊಟ ತಯಾರಿಸುವ ಕೆಲಸ ಮಾಡುವುದು ಸರಿಯಲ್ಲವೆಂದು ಆಕೆಯನ್ನು ಕೆಲಸ ಬಿಡಲು ಶಾಲಾ ಪ್ರಾಂಶುಪಾಲ ಕುಲುಭಾಯಿ ತಕ್ರಾನಿ ಒತ್ತಡ ಹೇರುತ್ತಿದ್ದ ಎನ್ನಲಾಗಿದೆ.

ಆದರೆ ಕಳೆದ ಜೂ. 8ರಂದು ಆತ ಹಾಗೂ ಆತನ ಸಹವರ್ತಿಗಳು ಸೇರಿ ಮಹಿಳೆಗೆ ಥಳಿಸಿದ್ದಾರೆ. ಅಮ್ಮನ ರಕ್ಷಣೆಗೆ ಬಂದ ಆಕೆಯ 8 ವರ್ಷದ ಮಗನನ್ನು ನೆಲಕ್ಕೆ ಬಡಿಯುವ ದೃಶ್ಯವೂ ವಿಡಿಯೋದಲ್ಲಿ ಸೆರೆಯಾಗಿದೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.