Asianet Suvarna News Asianet Suvarna News

ಪೂಜೆ ಮಾಡಲು ನಿರಾಕರಿಸಿದ ದಲಿತ ವಿದ್ಯಾರ್ಥಿಗಳು: ಹಾಸ್ಟೆಲ್ ತೊರೆದ ಸವರ್ಣೀಯರು!

ಸವರ್ಣೀಯ ವಿದ್ಯಾರ್ಥಿಗಳಿಗೆ ದಲಿತ ಸಹಪಾಠಿಗಳಿಂದ ಪೂಜೆಗೆ ನಕಾರ! ಹಾಸ್ಟೆಲ್ ನಲ್ಲಿ ಪೂಜೆ ಸಲ್ಲಿಸಲು ವಿರೋಧಿಸುತ್ತಿರುವ ದಲಿತ ವಿದ್ಯಾರ್ಥಿಗಳು! ಉತ್ತರಪ್ರದೇಶದ ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ವಿವಿ! ಸಿದ್ಧಾರ್ಥ ಹಾಸ್ಟೆಲ್ ತೊರೆಯುತ್ತಿರುವ ಸವರ್ಣೀಯ ವಿದ್ಯಾರ್ಥಿಗಳು 

Dalit students stopping upper caste students to perform pooja in hostel
Author
Bengaluru, First Published Oct 5, 2018, 4:58 PM IST
  • Facebook
  • Twitter
  • Whatsapp

ಲಕ್ನೋ(ಅ.5): ಇಲ್ಲಿನ ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ವಿಶ್ವವಿದ್ಯಾನಿಲಯದಲ್ಲಿ ದಲಿತ ವಿದ್ಯಾರ್ಥಿಗಳು, ಸವರ್ಣೀಯ ಸಹಪಾಠಿಗಳಿಗೆ ಪೂಜೆ ಮಾಡಲು ನಿರಾಕರಿಸಿದ್ದಕ್ಕೆ, ವಿದ್ಯಾರ್ಥಿಗಳು ಹಾಸ್ಟೆಲ್ ತೊರೆದ ಘಟನೆ ನಡೆದಿದೆ.

ವಿವಿಯ ಸಿದ್ಧಾರ್ಥ ಹಾಸ್ಟೆಲ್ ನಲ್ಲಿ ದಲಿತ ವಿದ್ಯಾರ್ಥಿಗಳು ತಮಗೆ ಪೂಜೆ ಮಾಡಲು ಬಿಡುತ್ತಿಲ್ಲ ಎಂದು ಸವರ್ಣೀಯ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಅಲ್ಲದೇ ಸಿದ್ಧಾರ್ಥ ಹಾಸ್ಟೆಲ್ ನಲ್ಲಿ ಕೇವಲ ದಲಿತ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನೀಡುವಂತೆಯೂ ಒತ್ತಾಯಿಸಲಾಗುತ್ತಿದೆ ಎನ್ನಲಾಗಿದೆ.

ಇದೇ ವೇಳೆ ಈ ಕುರಿತು ಹಲವು ಬಾರಿ ದೂರು ನೀಡಿದರೂ, ವಿವಿ ಆಡಳಿತ ಮಂಡಳಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸವರ್ಣೀಯ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ವಿವಿ ಕ್ಯಾಂಪಸ್ ಗಳು, ಹಾಸ್ಟೆಲ್ ಗಳಲ್ಲಿ ತಾರತಮ್ಯ ನೀತಿ ಅನುಸರಿಸುವುದು ಯಾವ ನ್ಯಾಯ ಎಂಬುದು ಈ ವಿದ್ಯಾರ್ಥಿಗಳು ಕೇಳುತ್ತಿರುವ ಪ್ರಶ್ನೆಯಾಗಿದೆ.

Follow Us:
Download App:
  • android
  • ios