ಇಂಧನ ಸಚಿವ ಡಿ.ಕೆ. ಶಿವಕುಮಾರ ಅವರ ಸಹಭಾಗಿತ್ವದ್ದು ಎನ್ನಲಾದ ಚಿರಸ್ಥಾಯಿ ಕಂಪನಿ ಗಂಗಾವತಿ ತಾಲೂಕಿನ ತಿಪ್ಪನಾಳ ಗ್ರಾಮದ ಬಳಿ ಸ್ಥಾಪಿಸುತ್ತಿದ್ದ ಸೋಲಾರ್ ಘಟಕಕ್ಕೆ ದಲಿತ ಸಂಘಟನೆಗಳ ಕಾರ್ಯಕರ್ತರು (ಘಟಕ) ಬೀಗ ಜಡಿದಿದ್ದಾರೆ.
ಕೊಪ್ಪಳ: ಇಂಧನ ಸಚಿವ ಡಿ.ಕೆ. ಶಿವಕುಮಾರ ಅವರ ಸಹಭಾಗಿತ್ವದ್ದು ಎನ್ನಲಾದ ಚಿರಸ್ಥಾಯಿ ಕಂಪನಿ ಗಂಗಾವತಿ ತಾಲೂಕಿನ ತಿಪ್ಪನಾಳ ಗ್ರಾಮದ ಬಳಿ ಸ್ಥಾಪಿಸುತ್ತಿದ್ದ ಸೋಲಾರ್ ಘಟಕಕ್ಕೆ ದಲಿತ ಸಂಘಟನೆಗಳ ಕಾರ್ಯಕರ್ತರು (ಘಟಕ) ಬೀಗ ಜಡಿದಿದ್ದಾರೆ.
ನಿರ್ಮಾಣ ಹಂತದಲ್ಲಿಯೇ ವಿವಾದಕ್ಕೆ ಸಿಲುಕಿರುವ ಈ ಘಟಕಕ್ಕೆ ಪ್ರಗತಿಪರ ಸಂಘಟನೆಗಳು ಬೀಗ ಜಡಿದಿದ್ದರಿಂದ ಕಾಮಗಾರಿಯನ್ನು ಕಳೆದೆರಡು ದಿನಗಳಿಂದ ಸ್ಥಗಿತ ಮಾಡಲಾಗಿದೆ. ಸುಮಾರು 28 ದಲಿತ ಕುಟುಂಬಗಳು ಹಲವು ವರ್ಷದಿಂದ ಉಳುಮೆ ಮಾಡುತ್ತಿರುವ ಈ ಭೂಮಿ ಕುರಿತ ವಿವಾದ ಎಸ್‌ಸಿ, ಎಸ್‌ಟಿ ಆಯೋಗದ ನ್ಯಾಯಾಲಯ ಮೆಟ್ಟಿಲೇರಿತ್ತು.
ಯಥಾಸ್ಥಿತಿ ಕಾಯ್ದುಕೊಳ್ಳವಂತೆ ಕೋರ್ಟ್ ಆದೇಶ ಮಾಡಿದ್ದರೂ ಜಿಲ್ಲಾಡಳಿತ ನುಣಚಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಪ್ರತಿಭಟನಾಕಾರರು ಪ್ಲಾಂಟ್‌ಗೆ ಬೀಗ ಜಡಿದಿದ್ದಾರೆ. ಈ ದಲಿತ ಕುಟುಂಬಗಳನ್ನು ಒಕ್ಕಲಬ್ಬಿಸಿ ಇಲ್ಲಿ ಚಿರಸ್ಥಾಯಿ ಕಂಪನಿ ಸೋಲಾರ್ ಪ್ಲಾಂಟ್ ನಿರ್ಮಿಸಲಾಗುತ್ತಿದೆ. ಈ ಭೂಮಿ ನಮ್ಮದೆಂದು ಚಿರಸ್ಥಾಯಿ ಕಂಪನಿಗೆ ಭೂಮಿಯನ್ನು ಗುತ್ತಿಗೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
