28ರಂದು ಬೌದ್ಧ ಧರ್ಮಕ್ಕೆ ಹಿಂದುಗಳ ಮತಾಂತರ

First Published 24, Feb 2018, 10:51 AM IST
DaliT Families To Convert Into Buddhism
Highlights
  • ಜಾತಿವಾದಿ ಪಟ್ಟಭದ್ರ ಹಿತಾಸಕ್ತಿಗಳ ದಬ್ಬಾಳಿಕೆಗೆ ಬೇಸತ್ತು ಮತಾಂತರ
  • ದಲಿತರು ಸ್ವಾಭಿಮಾನದಿಂದ ಬದುಕಲು ಆಗುತ್ತಿಲ್ಲ. ಹೀಗಾಗಿ, ಮತಾಂತರ

ಕಲಬುರಗಿ: ಜಾತಿವಾದಿ ಪಟ್ಟಭದ್ರ ಹಿತಾಸಕ್ತಿಗಳ ದಬ್ಬಾಳಿಕೆಗೆ ಬೇಸತ್ತು ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಕೊಂಡಗುಳಿ ಗ್ರಾಮದ 58 ಕುಟುಂಬಗಳ ಸದಸ್ಯರು ಫೆ.28ರಂದು ಸಾಮೂಹಿಕವಾಗಿ ಬೌದ್ಧಧರ್ಮಕ್ಕೆ ಮತಾಂತರಗೊಳ್ಳುತ್ತಿದ್ದಾರೆ ಎಂದು ದಲಿತ ಸೇನೆ ರಾಜ್ಯಾಧ್ಯಕ್ಷ ಡಾ.ವಿಠ್ಠಲ ದೊಡ್ಡಮನಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಲಿತರು ಸ್ವಾಭಿಮಾನದಿಂದ ಬದುಕಲು ಆಗುತ್ತಿಲ್ಲ. ಹೀಗಾಗಿ, ಮತಾಂತರಗೊಳ್ಳುತ್ತಿದ್ದೇವೆ. ಅಂದು ಬೌದ್ಧ ಭಿಕ್ಷುಗಳು ಮತಾಂತರ ಕಾರ್ಯ ನೆರವೇರಿಸಲಿದ್ದಾರೆ ಎಂದರು.

loader