ಆಂಧ್ರಪ್ರದೇಶದ ಕೂಲಿ ಕಾರ್ಮಿಕನೊಬ್ಬ ರಾತ್ರೋರಾತ್ರಿ ಕುಬೇರನಾಗಿದ್ದಾನೆ. ಇದ್ದಕ್ಕಿದ್ದಂತೆ ಆತನ ಬ್ಯಾಂಕ್ ಅಕೌಂಟಿನಲ್ಲಿ 1.26 ಕೋಟಿ ಪತ್ತೆಯಾಗಿದೆ. ಚಿತ್ತೂರು ಜಿಲ್ಲೆಯ ಅಮೇಲಿಪಲ್ಲಿ ಹಳ್ಳಿಯ ಕಾರ್ಮಿಕ ನಜೀರ್`ಗೆ ಬ್ಯಾಂಕ್`ನಿಂದ ಮೆಸೇಜ್ ಬಂದಾಗ ಅಕ್ಷರಶಃ ಶಾಕ್ ಆಗಿದೆ.

ಚಿತ್ತೂರು(ಡಿ.17): ಆಂಧ್ರಪ್ರದೇಶದ ಕೂಲಿ ಕಾರ್ಮಿಕನೊಬ್ಬ ರಾತ್ರೋರಾತ್ರಿ ಕುಬೇರನಾಗಿದ್ದಾನೆ. ಇದ್ದಕ್ಕಿದ್ದಂತೆ ಆತನ ಬ್ಯಾಂಕ್ ಅಕೌಂಟಿನಲ್ಲಿ 1.26 ಕೋಟಿ ಪತ್ತೆಯಾಗಿದೆ. ಚಿತ್ತೂರು ಜಿಲ್ಲೆಯ ಅಮೇಲಿಪಲ್ಲಿ ಹಳ್ಳಿಯ ಕಾರ್ಮಿಕ ನಜೀರ್`ಗೆ ಬ್ಯಾಂಕ್`ನಿಂದ ಮೆಸೇಜ್ ಬಂದಾಗ ಅಕ್ಷರಶಃ ಶಾಕ್ ಆಗಿದೆ. ಬುಧವಾರ ಕಾರ್ಮಿಕ ತನ್ನ ಅಕೌಂಟಿಗೆ 250 ರೂಪಾಯಿಗೆ ಡೆಪಾಸಿಟ್ ಮಾಡಿದ್ದಾನೆ. ಈ ಸಂದರ್ಭ ಬಂದ ಮೆಸೇಜ್`ನಲ್ಲಿ 1.25 ಕೋಟಿ ಡೆಪಾಸಿಟ್ ಆಗಿರುವುದು ಕಂಡುಬಂದಿದೆ.

ಈ ಬಗ್ಗೆ ಬ್ಯಾಂಕ್ ಸಿಬ್ಬಂದಿಯನ್ನ ಪ್ರಶ್ನಿಸಿದಾಗ ನಮಗೆ ಮಾಹಿತಿ ಇಲ್ಲ ಎಂದಿದ್ದಾರೆ. ಇದೀಗ, ಆದಾಯ ತೆರಿಗೆ ಇಲಾಖೆ ಹಣದ ಮೂಲದ ಬಗ್ಗೆ ತನಿಖೆ ನಡೆಸುತ್ತಿದೆ.