ನಿಜ ಹೇಳಬೇಕೆಂದರೆ, ಯುವಕರಿಗಿಂತ 70ಕ್ಕಿಂತ ಅಧಿಕ ವಯಸ್ಸಿನವರು ಸೆಕ್ಸ್‌ನಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ ಎಂದು ವರದಿ ತಿಳಿಸಿದೆ.

ಜನ ಇತ್ತೀಚೆಗೆ ಮಾತಾಡೋದು ಬಿಟ್ಟು ಫೇ'ಸ್'ಬುಕ್, ಟೀವಿ ನೋಡೋದರಲ್ಲೇ ಹೆಚ್ಚು ತೊಡಗಿಸಿಕೊಳ್ಳುತ್ತಿದ್ದಾರೆ ಎಂಬುದು ಎಲ್ಲರ ದೂರು.

ದೂರು, ಕಿರಿಕಿರಿ ಮಟ್ಟಿಗೇ ಇದ್ದ ಈ ವಿಷಯ ಇದೀಗ ಬೆಡ್‌ರೂಂವರೆಗೂ ಹೋಗಿದೆ ಎಂದು ಸಮೀಕ್ಷೆಯೊಂದು ಹೇಳಿದೆ. ಜನ ವಿಪರೀತವಾಗಿ ಟಿವಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿರುವುದು ಸೆಕ್ಸ್ ಜೀವನದ ಮೇಲೆ ಪರಿಣಾಮ ಬೀರುತ್ತಿದೆ ಎಂದು ವರದಿ ಹೇಳಿದೆ. ಅಮೆರಿಕದಲ್ಲಿ ಸೆಕ್ಸ್ ಬಗ್ಗೆ ಜನರಿಗೆ 90ರ ದಶಕದಲ್ಲಿದ್ದಷ್ಟು ಆಸಕ್ತಿ ಈಗಿಲ್ಲವಂತೆ. ಫೇಸ್ ಬುಕ್ ಚಟುವಟಿಕೆಯಲ್ಲಿ ತೊಡಗಿರುವುದು, ಅತಿ ಹೆಚ್ಚು ಟಿವಿ ನೋಡುವುದು ಅಥವಾ ಕಾರ್ಯಕ್ರಮಗಳನ್ನು ನೋಡುವುದು ಜನರ ಸೆಕ್ಸ್ ಆಸಕ್ತಿ ಕುಸಿತಕ್ಕೆ ಕಾರಣವಂತೆ. ನಿಜ ಹೇಳಬೇಕೆಂದರೆ, ಯುವಕರಿಗಿಂತ 70ಕ್ಕಿಂತ ಅಧಿಕ ವಯಸ್ಸಿನವರು ಸೆಕ್ಸ್‌ನಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ ಎಂದು ವರದಿ ತಿಳಿಸಿದೆ.