ಪರಪ್ಪನ ಅಗ್ರಹಾರಕ್ಕಾದರೂ ಕಳಿಸಲಿ, ಸಿಬಿಐಗಾದರೂ ಕಳಿಸಲಿ, ನಾನು ಯಾವುದಕ್ಕೂ ಜಗ್ಗಲ್ಲ; ’ಪವರ್’ ಫುಲ್ ಉತ್ತರ

First Published 15, Feb 2018, 10:55 AM IST
D K Shivkumar Answer to IT Raid And FIR
Highlights

ಡಿಕೆಶಿ ಮೇಲೆ ಐಟಿ ಎಫ್’ಐಆರ್ ತೂಗುಗತ್ತಿ ತೂಗುತ್ತಿದ್ದು ಈ ಬಗ್ಗೆ ಖುದ್ದು ಶಿವಕುಮಾರ್ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ.  

ಬೆಂಗಳೂರು (ಫೆ.16): ಡಿಕೆಶಿ ಮೇಲೆ ಐಟಿ ಎಫ್’ಐಆರ್ ತೂಗುಗತ್ತಿ ತೂಗುತ್ತಿದ್ದು ಈ ಬಗ್ಗೆ ಖುದ್ದು ಶಿವಕುಮಾರ್ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ.  

ಹಳ್ಳಿಯಿಂದ ಬಂದ್ರೂ ಕಿವಿ ಮೇಲೆ ಹೂ ಇಟ್ಟುಕೊಂಡು ಬಂದಿಲ್ಲ ಎಂದು ಖಡಕ್ಕಾಗಿ ಹೇಳಿದ್ದಾರೆ.  ಹಾಳೆ ಹರಿದಿರುವ ಬಗ್ಗೆ ಸ್ಪಷ್ಟನೆ ನೀಡಿದ್ದು, ನನಗೆ ಯಾವುದೇ ನೋಟಿಸ್​ ಬಂದಿಲ್ಲ.   ಆದಾಯ ತೆರಿಗೆ ಇಲಾಖೆಯ ವರದಿ ಕೊಡಲು ಅವಕಾಶಗಳಿವೆ.  ನಾವು ಯಾವುದೇ ದಾಖಲೆ ಬಿಡುಗಡೆ ಮಾಡಿಲ್ಲ.  ಅವರು ಯಾವುದೇ ನೋಟಿಸ್​ ನೀಡಿಲ್ಲ ಎಂದು ಡಿಕೆಶಿ ಸ್ಪಷ್ಟನೆ ನೀಡಿದ್ದಾರೆ. 
ಜನಾಶೀರ್ವಾದ ಯಾತ್ರೆ ವೇಳೆ ಸುದ್ದಿ ಬರುತ್ತಿರುವುದರ ಹಿಂದೆ ರಾಜಕೀಯ ಉದ್ದೇಶವಿದೆ.  ಎಫ್’​ಐಆರ್​ ಹಿಂದೆ ರಾಜಕೀಯ ಉದ್ದೇಶವಿದೆ ಎಂದಿದ್ದಾರೆ. 
ನಾನು ಚೀಟಿ ಹರಿದು ಹಾಕಿದ್ದಕ್ಕೆ ಸಾಕ್ಷಿ ಇದೆಯಾ? ನಾನು ಚೀಟಿ ಹರಿದಿದ್ದು ಬಿಜೆಪಿ ನಾಯಕರಿಗೆ ಹೇಗೆ ತಿಳಿಯಿತು? ನೋಟಿಸ್​ ಬಂದರೆ ಕಾನೂನು ಮೂಲಕವೇ ಉತ್ತರ ನೀಡುತ್ತೇನೆ.  ಕಾನೂನು ಚೌಕಟ್ಟಿನ ಮೂಲಕವೇ ವ್ಯವಹರಿಸುತ್ತಿದ್ದೇನೆ. 
ಪರಪ್ಪನ ಅಗ್ರಹಾರಕ್ಕಾದರೂ ಕಳಿಸಲಿ, ಸಿಬಿಐಗಾದರೂ ಕಳಿಸಲಿ.  ನಾನು ಯಾವುದಕ್ಕೂ ಹೆದರುವ ಮನುಷ್ಯನಲ್ಲ ಎಂದು ಖಡಕ್ಕಾಗಿ ಹೇಳಿದ್ದಾರೆ.  ಸತ್ಯ, ನ್ಯಾಯ ಧರ್ಮ ಬಿಟ್ಟು ರಾಜಕಾರಣ ಮಾಡಿಲ್ಲ. ನನ್ನನ್ನು ರಕ್ಷಿಸುವ ಶಕ್ತಿ ಕಾನೂನಿಗಿದೆ.  ಚುನಾವಣೆಗೆ ಸ್ಪರ್ಧಿಸದಂತೆ ತಡೆಯುವ ತಂತ್ರ ನಡೆಯುತ್ತಿವೆ ಎಂದಿದ್ದಾರೆ. 

ಐಟಿ ದಾಳಿ ನಡೆದು 7 ತಿಂಗಳ ನಂತರ ಕೇಸ್ ದಾಖಲಿಸುವ ಉದ್ದೇಶವೇನು? ನಾನು ಚೀಟಿ ಹರಿದಿದ್ದರೆ ಅಂದೇ ನನ್ನ ಮೇಲೆ ಕೇಸ್ ದಾಖಲಿಸಬೇಕಿತ್ತು.  ನಾನು ಚೀಟಿ ಹರಿದ ಬಗ್ಗೆ ತಕ್ಷಣಕ್ಕೆ ಕೇಂದ್ರ ಸಚಿವರಿಗೆ ಹೇಗೆ ಮಾಹಿತಿ ಸಿಕ್ತು? ನನ್ನನ್ನು ಎಲೆಕ್ಷನ್​ಗೆ ಸ್ಪರ್ಧಿಸದಂತೆ ತಡೆಯುವ ಹುನ್ನಾರ ನಡೆಯುತ್ತಿದೆ. ಎಲೆಕ್ಷನ್​ಗೆ ಸ್ಪರ್ಧಿಸದಂತೆ ನನ್ನನ್ನು ತಡೆಯುವುದು ಯಾರಿಂದಲೂ ಸಾಧ್ಯವಿಲ್ಲ.  40 ವರ್ಷದಿಂದ ರಾಜಕೀಯ ಮಾಡುತ್ತಿದ್ದೇನೆ. 29ನೇ ವಯಸ್ಸಿಗೆ ಮಂತ್ರಿಯಾದವನು ಎಂದಿದ್ದಾರೆ. 

loader