ಕಳೆದ ಕೆಲ ತಿಂಗಳ ಹಿಂದೆ ದೇಶದ ಹಲವು ಪ್ರದೇಶಗಳಲ್ಲಿ ಭಾರೀ ಪ್ರಮಾಣದಲ್ಲಿ ಚಂಡ ಮಾರುತ ಪ್ರವಾಹ ಸದೃಶ ವಾತಾವರಣ ನಿರ್ಮಾಣವಾಗಿತ್ತು. ಇದೀಗ ಮತ್ತೊಮ್ಮೆ ದೇಶಕ್ಕೆ ಚಂಡಮಾರುತದ ಎಚ್ಚರಿಕೆ ನಿಡಲಾಗಿದೆ. 

ಚೆನ್ನೈ: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಚಂಡಮಾರುತವಾಗಿ ಪರಿವರ್ತನೆಗೊಂಡಿದ್ದು, ಉತ್ತರ ತಮಿಳುನಾಡು ಮತ್ತು ದಕ್ಷಿಣ ಆಂಧ್ರ ಪ್ರದೇಶ ಕರಾವಳಿಗೆ ನ. 15 ರಂದು ಅಪ್ಪಳಿಸಲಿದೆ. 

‘ಗಜ’ ಹೆಸರಿನ ಚಂಡಮಾರುತ ಚೆನ್ನೈನ ಈಶಾನ್ಯ ದಿಕ್ಕಿನ 860 ಕೀ.ಮೀ. ದೂರದಲ್ಲಿ ಗಂಟೆಗೆ 12 ಕಿ.ಮೀ ವೇಗದಲ್ಲಿ ಚಲಿಸುತ್ತಿದೆ. 

ಮುಂದಿನ 24 ಗಂಟೆಗಳಲ್ಲಿ ತೀವ್ರ ಸ್ವರೂಪ ಪಡೆದು ಕಡಲೂರು ಹಾಗೂ ಶ್ರೀಹರಿಕೋಟಾದ ಮಧ್ಯೆ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ತಮಿಳುನಾಡು, ಪಾಂಡಿಚೇರಿ ಮತ್ತು ಆಂಧ್ರ ಪ್ರದೇಶ ಕರಾವಳಿ ಪ್ರದೇಶದಲ್ಲಿ ಗಂಟೆಗೆ ೮೦ ಕಿ.ಮೀ. ವೇಗದಲ್ಲಿ ಚಂಡಮಾರುತ ಬೀಸುವ ಸಾಧ್ಯತೆ ಇದೆ.