Asianet Suvarna News Asianet Suvarna News

ರಾಜ್ಯದಲ್ಲಿ ಬೆಳೆದು ನಿಂತಿದೆ ರಿಪಬ್ಲಿಕ್ ಆಫ್ ಲಿಕ್ಕರ್!

ದೇಶಕ್ಕೊಂದು ಕಾನೂನಾದ್ರೆ ರಾಜ್ಯದ ಲಿಕ್ಕರ್​ ದಂಧೆಯವರದ್ದೇ ಒಂದು ಕಾನೂನು. ರಾಜ್ಯದಲ್ಲಿ ಹತ್ತು ಸಾವಿರ ವೈನ್ಸ್​, ಬಾರ್ಸ್, ಕ್ಲಬ್ಸ್​​​​ ನಮ್ಮ ರಾಜ್ಯದಲ್ಲಿ ಲೈಸೆನ್ಸ್​ ಪಡೆದು ಮದ್ಯ ಮಾರುತ್ತಿವೆ. ಆದ್ರೆ ಹೆಚ್ಚಿನ ಮದ್ಯ ಮಾರಾಟಗಾರರು ಮಾತ್ರ ನೆಲದ ಕಾನೂನು ಮೀರಿ ಬೆಳೆದಿದ್ದಾರೆ. ಅದು ಹೇಗೆ ಅನ್ನೋದು ನಾವು ಬೆಂಗಳೂರಿನಿಂದ ಬೀದರ್​'ವರೆಗೆ ಮಂಗಳೂರಿನಿಂದ ಕೋಲಾರದವರೆಗೆ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ.

Customers looted by Liquor Mafia Across State

ರಾಜ್ಯದಲ್ಲಿ ರಿಪಬ್ಲಿಕ್​​ ಆಫ್​ ಲಿಕ್ಕರ್​ ಒಂದು ಸ್ಥಾಪನೆಯಾಗಿದೆ. ಅಲ್ಲಿ ನೆಲದ ಕಾನೂನಿಗೆ ಬೆಲೆಯೇ ಇಲ್ಲ. ಅಬಕಾರಿ ಇಲಾಖೆಗೆ ಕೇರೇ ಅನ್ನಲ್ಲ. ಇಂಥಾ ಆತಂಕಕಾರಿ ಬೆಳವಣಿಗೆಯೊಂದು ರಾಜ್ಯದಲ್ಲಿ ನಡಿಯುತಿರೋದು ನಮ್ಮ ಕವರ್​ಸ್ಟೋರಿ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ.

ದೇಶಕ್ಕೊಂದು ಕಾನೂನಾದ್ರೆ ರಾಜ್ಯದ ಲಿಕ್ಕರ್​ ದಂಧೆಯವರದ್ದೇ ಒಂದು ಕಾನೂನು. ರಾಜ್ಯದಲ್ಲಿ ಹತ್ತು ಸಾವಿರ ವೈನ್ಸ್​, ಬಾರ್ಸ್, ಕ್ಲಬ್ಸ್​​​​ ನಮ್ಮ ರಾಜ್ಯದಲ್ಲಿ ಲೈಸೆನ್ಸ್​ ಪಡೆದು ಮದ್ಯ ಮಾರುತ್ತಿವೆ. ಆದ್ರೆ ಹೆಚ್ಚಿನ ಮದ್ಯ ಮಾರಾಟಗಾರರು ಮಾತ್ರ ನೆಲದ ಕಾನೂನು ಮೀರಿ ಬೆಳೆದಿದ್ದಾರೆ. ಅದು ಹೇಗೆ ಅನ್ನೋದು ನಾವು ಬೆಂಗಳೂರಿನಿಂದ ಬೀದರ್​'ವರೆಗೆ ಮಂಗಳೂರಿನಿಂದ ಕೋಲಾರದವರೆಗೆ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ.

ಮದ್ಯದಂಗಡಿಗಳಲ್ಲಿ ಎಂ.ಆರ್​.ಪಿಗೆ ಬೆಲೆಯೇ ಇಲ್ಲ. ಇದು ಬರೀ ಹಗಲು ದರೋಡೆಯಲ್ಲ. ಗ್ರಾಹಕರ ಮೇಲಾಗುತ್ತಿರೋ ದೌರ್ಜನ್ಯ. ರಾಜಾರೋಷವಾಗಿ ಕಪ್ಪು ಹಣ ಸಂಗ್ರಹಿಸೋ ದೇಶ ದ್ರೋಹದ ಕೆಲಸ. ಯಾಕಂದ್ರೆ ಮದ್ಯ ಮಾರಾಟಗಾರರು ಮಂತ್ರಿಗಳಿಂದ ಹಿಡಿದು ಆಯುಕ್ತರವರೆಗೆ ಎಲ್ಲರಿಗೂ ಲಂಚ ತಿನ್ನಿಸುತ್ತಿದ್ದಾರಂತೆ. ಹೀಗೆ ಈ ವಿಷ ಕುಡಿಸೋ ವ್ಯಾಪಾರ, ನೆಲ ಕಾನೂನು ಮೀರಿ ವರ್ತಿಸುತ್ತಿದ್ದರೂ ನಮ್ಮ ಬಲಹೀನ ಸರ್ಕಾರ ಕೈಕಟ್ಟಿ ಕುಳಿತಿದೆ. ಮದ್ಯ ಮಾರಾಟಗಾರರು ಕೊಡೋ 60, 90ಗೆ ನಾಲಿಗೆ ಚಾಚಿ ನೈತಿಕತೆಯನ್ನೇ ಕಳೆದುಕೊಂಡು ರಿಪಬ್ಲಿಕ್​ ಆಫ್​ ಲಿಕ್ಕರ್​ಗೆ ಸಲಾಂ ಹೊಡೀತಿದೆ.

ವರದಿ: ರಂಜಿತ್​ ಹಾಗೂ ವಿಜಯಲಕ್ಷ್ಮಿ ಶಿಬರೂರು ಸುವರ್ಣ ನ್ಯೂಸ್​

Follow Us:
Download App:
  • android
  • ios