ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಎಸ್‌ಬಿಐ, ಐಸಿಐಸಿಐ, ಆ್ಯಕ್ಸಿಸ್, ಸಿಟಿ ಸೇರಿದಂತೆ ಹಲವು ಬ್ಯಾಂಕ್‌ಗಳ ಹೆಸರಿನಲ್ಲಿರುವ ನಕಲಿ ಆ್ಯಪ್‌ಗಳು, ಲಕ್ಷಾಂತರ ಗ್ರಾಹಕರ ಮಾಹಿತಿ ಕದ್ದಿರುವ ಸಾಧ್ಯತೆ ಇದೆ ಎಂದು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭದ್ರತಾ ಸೇವೆ ಒದಗಿಸುವ ಸೋಫೋಸ್ ಲ್ಯಾಬ್‌ನ ವರದಿ ಎಚ್ಚರಿಸಿದೆ. 

ನವದೆಹಲಿ (ಅ. 24): ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಎಸ್‌ಬಿಐ, ಐಸಿಐಸಿಐ, ಆ್ಯಕ್ಸಿಸ್, ಸಿಟಿ ಸೇರಿದಂತೆ ಹಲವು ಬ್ಯಾಂಕ್‌ಗಳ ಹೆಸರಿನಲ್ಲಿರುವ ನಕಲಿ ಆ್ಯಪ್‌ಗಳು, ಲಕ್ಷಾಂತರ ಗ್ರಾಹಕರ ಮಾಹಿತಿ ಕದ್ದಿರುವ ಸಾಧ್ಯತೆ ಇದೆ ಎಂದು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭದ್ರತಾ ಸೇವೆ ಒದಗಿಸುವ ಸೋಫೋಸ್ ಲ್ಯಾಬ್‌ನ ವರದಿ ಎಚ್ಚರಿಸಿದೆ.

ಈ ನಕಲಿ ಆ್ಯಪ್‌ಗಳು, ಬ್ಯಾಂಕ್‌ನ ಮೂಲ ಆ್ಯಪ್‌ನ ರೀತಿಯಲ್ಲೇ ಇದ್ದು ಗ್ರಾಹಕರನ್ನು ವಂಚಿಸುತ್ತಿವೆ. ಗ್ರಾಹಕರಿಗೆ ಕ್ಯಾಶ್‌ಬ್ಯಾಕ್ ಸೇರಿದಂತೆ ನಾನಾ ರೀತಿಯ ಸುಳ್ಳು ಆಫರ್‌ಗಳನ್ನು ನೀಡುವ ಮೂಲಕ ಅವರು, ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ಮಾಡುತ್ತಿವೆ.

ಹೀಗೆ ಆ್ಯಪ್ ಡೋನ್‌ಲೋನ್ ಮಾಡಿದ ಬಳಿಕ ಅವರು ನೀಡುವ ಮಾಹಿತಿಯನ್ನು ಆಧರಿಸಿ ಅವರ ಬ್ಯಾಂಕ್ ಖಾತೆ ಮತ್ತು ಡೆಬಿಡ್ ಕಾರ್ಡ್‌ನ ಮಾಹಿತಿಯನ್ನು ಕದಿಯುತ್ತಿವೆ ಎಂದು ಸೋಫೋಸ್ ವರದಿ ಹೇಳಿದೆ. ಈ ಹಿನ್ನೆಲೆಯಲ್ಲಿ ಕೆಲವು ಬ್ಯಾಂಕ್ ಗಳು ಪ್ರತಿಕ್ರಿಯೆ ನೀಡಿದ್ದು, ಈ ಬಗ್ಗೆ ಗಮನ ಹರಿಸುವುದಾಗಿ ಹೇಳಿವೆ. ಇನ್ನು ಕೆಲವು ಬ್ಯಾಂಕ್‌ಗಳು, ತಮಗೆ ಮಾಹಿತಿ ವಂಚನೆಯ ಯಾವುದೇ ದೂರು ಬಂದಿಲ್ಲ ಎಂದು ಹೇಳಿವೆ.