ಫ್ರಾನ್ಸ್(ಅ.02): ಐಪೋನ್ ಗ್ರಾಹಕನೋರ್ವ ತನ್ನ ಮೊಬೈಲ್ ಸರಿಪಡಿಸಿಕೊಡಲು ನಿರಾಕರಿಸಿದ ಐಫೋನ್ ಸ್ಟೋರ್'ನಲ್ಲಿ ಇದ್ದ-ಬದ್ದ ಐಪ್ಯಾಡ್, ಐಪೋನ್ ಮತ್ತು ಮ್ಯಾಕ್ ಕಂಪ್ಯೂಟರ್ ಗಳನ್ನು ಒಡೆದು ಹಾಕಿದ್ದಾನೆ.

ಈ ಘಟನೆ ಫ್ರಾನ್ಸ್'ನ ಮಾಲ್ ವೊಂದರಲ್ಲಿ ನಡೆದಿದೆ. ಹೊಸ ಐ-ಫೋನ್ವೊಂದು ಹಾಳಾಗಿದ್ದು, ಅನ್ನು ಬದಲಾಯಿಸಿಕೊಡುವಂತೆ ಗ್ರಾಹಕನೋರ್ವ ಮನವಿ ಮಾಡಿದ್ದಾನೆ. ಆದರೆ ಇದಕ್ಕೆ ಐಫೋನ್ ಸ್ಟೋರ್ ಮಾಲೀಕರು ನಿರಾಕರಿಸಿದೆ. 

ಇದರಿಂದ ಕೋಪಗೊಂಡ ಗ್ರಾಹಕ ಸ್ಟೋರ್ ನಲ್ಲಿ ಪ್ರದರ್ಶನಕ್ಕೆ ಇಟ್ಟಿದ 20ಕ್ಕೂ ಹೆಚ್ಚು ಐಪೋನ್ ಗಳು, ಐಪ್ಯಾಡ್ ಮತ್ತು ಕಂಪ್ಯೂಟರ್ ಗಳನ್ನು ಸ್ಟೀಲ್ ಬಾಲ್ ನಿಂದ ಒಡೆದು ಹಾಕಿದ್ದಾನೆ. ಸರಿ ಸುಮಾರು 20 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ ಎನ್ನಲಾಗಿದೆ.