ವ್ಯಾಟ್ಸನ್ ಸಿಡಿಲ ಶತಕ : ರಾಜಸ್ಥಾನ್ ವಿರುದ್ಧ ಚೆನ್ನೈಗೆ ಸುಲಭ ಗೆಲುವು

CSK Win By 64 Runs
Highlights

. ಚಾಹಾರ್, ಠಾಕೂರ್, ಬ್ರಾವೋ ಹಾಗೂ ಶರ್ಮಾ ತಲಾ 2 ವಿಕೇಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ರಾಜಸ್ಥಾನ್ ಪರ ಸ್ಟೋಕ್ಸ್ 45, ಬಟ್ಲರ್ 22 ರನ್  ಬರಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್'ಮೆನ್'ಗಳು ವಿಫಲರಾದರು.

ಪುಣೆ(ಏ.20): ಹಿರಿಯ ಆಟಗಾರ ಶೇನ್ ವ್ಯಾಟ್ಸ್'ನ್ ಸಿಡಿಲ ಶತಕದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ 64 ರನ್'ಗಳ ಜಯ ಸಾಧಿಸಿದೆ.

ಚೆನ್ನೈ ನೀಡಿದ 205 ಗುರಿಯನ್ನು ರಾಜಸ್ಥಾನ್ ತಂಡ 18.3 ಓವರ್'ಗಳಲ್ಲಿ 140 ರನ್'ಗಳಲ್ಲಿಯೇ ಪತನ ಕಂಡಿತು. ಚಾಹಾರ್, ಠಾಕೂರ್, ಬ್ರಾವೋ ಹಾಗೂ ಶರ್ಮಾ ತಲಾ 2 ವಿಕೇಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ರಾಜಸ್ಥಾನ್ ಪರ ಸ್ಟೋಕ್ಸ್ 45, ಬಟ್ಲರ್ 22 ರನ್  ಬರಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್'ಮೆನ್'ಗಳು ವಿಫಲರಾದರು.

ವ್ಯಾಟ್ಸ್'ನ್ ಸ್ಫೋಟಕ ಶತಕ

ಇದಕ್ಕೂ ಮೊದಲು ಟಾಸ್ ಗೆದ್ದ ರಾಜಸ್ಥಾನ್ ತಂಡ ಧೋನಿ ಪಡೆಯನ್ನು ಬ್ಯಾಟಿಂಗ್ ಆಹ್ವಾನಿಸಿತು.  ಆರಂಭಿಕ ಆಟಗಾರ ಅಂಬಾಟಿ ರಾಯುಡು  ಬೇಗನೆ ಔಟಾದರೂ ವ್ಯಾಟ್ಸನ್ ಹಾಗೂ ಸುರೇಶ್ ರೈನಾ(46: 9 ಬೌಂಡರಿ) ಜೋಡಿ 11.5 ಓವರ್'ಗಳಲ್ಲಿ 2ನೇ ವಿಕೇಟ್ ನಷ್ಟಕ್ಕೆ 131 ರನ್ ಪೇರಿಸಿದರು. ರೈನಾ ಕನ್ನಡಿಗ ಶ್ರೇಯಸ್ ಗೋಪಾಲ್'ಗೆ ಔಟಾದ ನಂತರ ಧೋನಿ, ಹಾಗು ಬಿಲ್ಲಿಂಗ್ಸ್ ಕೂಡ ಗೋಪಾಲ್'ಗೆ ವಿಕೇಟ್ ಒಪ್ಪಿಸಿದರು.

ಕೊನೆಯ 5 ಓವರ್ ಇದ್ದಾಗ ಆಗಮಿಸಿದ ಬ್ರಾವೋ (24 ) ವ್ಯಾಟ್ಸ್'ನ್'ಗೆ 5ನೇ ವಿಕೇಟ್'ಗೆ ಉತ್ತಮ ಜೊತೆಯಾಟ ನೀಡಿದರು. ವ್ಯಾಟ್ಸ್'ನ್ ಅಜೇಯ 106 ರನ್'ಗಳಲ್ಲಿ 9 ಬೌಂಡರಿ ಹಾಗೂ 6 ಸಿಕ್ಸ್'ರ್'ಗಳಿದ್ದವು. ರಾಜಸ್ಥಾನ್ ಪರ ಶ್ರೇಯಸ್ ಗೋಪಾಲ್ 20/3 ವಿಕೇಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.

 

ಸ್ಕೋರ್

ಚೆನ್ನೈ ಸೂಪರ್ ಕಿಂಗ್ಸ್ 20 ಓವರ್'ಗಳಲ್ಲಿ 204/5

(ವ್ಯಾಟ್ಸ್'ನ್ 106 ಅಜೇಯ, ರೈನಾ 46, ಶ್ರೇಯಸ್ ಗೋಪಾಲ್ 20/3)

ರಾಜಸ್ಥಾನ್ ರಾಯಲ್ಸ್ 18.3 ಓವರ್'ಗಳಲ್ಲಿ 140

(ಸ್ಟೋಕ್ಸ್ 45)

 

ಚೆನ್ನೈಗೆ 64 ರನ್ ಜಯ

 

loader