Asianet Suvarna News Asianet Suvarna News

ಸಿಆರ್'ಪಿಎಫ್ ಯೋಧರ ಮೇಲೆ ಹಲ್ಲೆಗೈದವರ ವಿರುದ್ಧ ಕಠಿಣ ಕ್ರಮ: ರಾಜನಾಥ್ ಸಿಂಗ್

ಶ್ರೀನಗರದಲ್ಲಿ ಲೋಕಸಭಾ ಚುನಾವಣೆ ಮತದಾನ ಮುಗಿಸಿ ಇವಿಎಂ ಮಷಿನ್ ಜೊತೆ ಬರುತ್ತಿದ್ದ ವೇಳೆ ಸಿಆರ್ ಪಿಎಫ್ ಯೋಧರ ಕೆಲ ಯುವಕರ ಗುಂಪು ಹಲ್ಲೆ ನಡೆಸಿರುವುದನ್ನು ಕಾಶ್ಮೀರ ಉಪ ಮುಖ್ಯಮಂತ್ರಿ ನಿರ್ಮಲ್ ಸಿಂಗ್ ಖಂಡಿಸಿದ್ದಾರೆ. ಈ ವೇಳೆ ಯೋಧರು ತೋರಿದ ತಾಳ್ಮೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

CRPF jawans assault video Govt promises action as support pours in for soldiers

ನವದೆಹಲಿ (ಏ.13): ಶ್ರೀನಗರದಲ್ಲಿ ಲೋಕಸಭಾ ಚುನಾವಣೆ ಮತದಾನ ಮುಗಿಸಿ ಇವಿಎಂ ಮಷಿನ್ ಜೊತೆ ಬರುತ್ತಿದ್ದ ವೇಳೆ ಸಿಆರ್'ಪಿಎಫ್ ಯೋಧರ ಕೆಲ ಯುವಕರ ಗುಂಪು ಹಲ್ಲೆ ನಡೆಸಿರುವುದನ್ನು ಜಮ್ಮು ಕಾಶ್ಮೀರ ಉಪ ಮುಖ್ಯಮಂತ್ರಿ ನಿರ್ಮಲ್ ಸಿಂಗ್ ಖಂಡಿಸಿದ್ದಾರೆ. ಈ ವೇಳೆ ಯೋಧರು ತೋರಿದ ತಾಳ್ಮೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಹಲ್ಲೆ ನಡೆಸಿರುವ ವಿಡಿಯೋವನ್ನು ನಾವು ನೋಡಿದ್ದೇವೆ. ಸಿಆರ್'ಪಿಎಫ್ ಯೋಧರ ಮೇಲೆ ಹಲ್ಲೆ ಮಾಡಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಇಲ್ಲಿ ಯೋಧರ ತಾಳ್ಮೆ ಗಮನಿಸಬೇಕಾದ ಅಂಶ.  ನಮ್ಮ ಭದ್ರತಾ ಪಡೆಗಳು ಶಿಸ್ತಿನ ಸಿಪಾಯಿಗಳು. ಇಂತಹ ಘಟನೆಗಳನ್ನು ಯಾರೊಬ್ಬರೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ. ಕ್ರಿಕೆಟಿಗರಾದ ಗೌತಮ್ ಗಂಭೀರ್, ವೀರೇಂದ್ರ ಸೆಹ್ವಾಗ್ ಸಿಆರ್ ಪಿಎಫ್ ಯೋಧರ ಬೆಂಬಲಕ್ಕೆ ನಿಂತಿದ್ದಾರೆ.

Latest Videos
Follow Us:
Download App:
  • android
  • ios