ಮಳೆ‌ ಅವಾಂತರಕ್ಕೆ ಸುಮಾರು 40 ಸಾವಿರ ಹೆಕ್ಟೇರ್ ಪ್ರದೇಶದ ಬೆಳೆ‌ ಹಾನಿಯಾಗಿದೆ.  ಆಲೂಗಡ್ಡೆ, ಹೊಗೆಸೊಪ್ಪು,ಶುಂಠಿ, ಭತ್ತ ಸೇರಿ ಹಲವು ಬೆಳೆಗಳು ಅತಿಯಾದ ಮಳೆಯಿಂದ ನಾಶವಾಗಿವೆ.  ಆಲೂರು, ಸಕಲೇಶಪುರ ಭಾಗದಲ್ಲಿ ಶುಂಠಿ, ಭತ್ತದ ಬೆಳೆ ಸಂಪೂರ್ಣ ಜಲಾವೃತಗೊಂಡಿದೆ.  

ಹಾಸನ‌ (ಜೂ. 14): ಮಳೆ‌ ಅವಾಂತರಕ್ಕೆ ಸುಮಾರು 40 ಸಾವಿರ ಹೆಕ್ಟೇರ್ ಪ್ರದೇಶದ ಬೆಳೆ‌ ಹಾನಿಯಾಗಿದೆ. ಆಲೂಗಡ್ಡೆ, ಹೊಗೆಸೊಪ್ಪು,ಶುಂಠಿ, ಭತ್ತ ಸೇರಿ ಹಲವು ಬೆಳೆಗಳು ಅತಿಯಾದ ಮಳೆಯಿಂದ ನಾಶವಾಗಿವೆ. 

ಆಲೂರು, ಸಕಲೇಶಪುರ ಭಾಗದಲ್ಲಿ ಶುಂಠಿ, ಭತ್ತದ ಬೆಳೆ ಸಂಪೂರ್ಣ ಜಲಾವೃತಗೊಂಡಿದೆ. ಹಾಸನ ತಾಲ್ಲೂಕಿನ ವ್ಯಾಪ್ತಿಯಲ್ಲಿ ಎಂಟು ಸಾವಿರ ಹೆಕ್ಟೇರ್ ಪ್ರದೇಶದ ಆಲೂಗಡ್ಡೆ ಬೆಳೆ ನಾಶವಾಗಿದೆ. ಅರಕಲಗೂಡು, ಹೊಳೆನರಸೀಪುರ ಭಾಗದಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದ ಹೊಗೆಸೊಪ್ಪು ಬೆಳೆ ನಾಶವಾಗಿದೆ. 

ಮಳೆ ಅವಾಂತರ ಮಾಹಿತಿ ಪಡೆಯಲು ಬೆಳೆ ಹಾನಿ ಸಮೀಕ್ಷೆ ಹಾಗೂ ಪರಿಹಾರ ಕ್ರಮಗಳ ಬಗ್ಗೆ ಮಾಹಿತಿ ಕಲೆಹಾಕಲು ಇಂದು ಮತ್ತು ನಾಳೆ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅಧಿಕಾರಿಗಳ ಸಭೆ ಕರೆದಿದ್ದಾರೆ.