ಕೇರಳದ ಮಲಂಕರಾ ಆಕ್ಸ್‌ಫರ್ಡ್‌ ಸಿರಿಯನ್‌ ಚರ್ಚ್ ಐವರು ಪಾದ್ರಿಗಳು ಮಹಿಳೆಯೊಬ್ಬಳನ್ನು ಬ್ಲ್ಯಾಕ್‌ಮೇಲ್‌ ಮಾಡಿ ಲೈಂಗಿಕ ದೌರ್ಜನ್ಯವೆಸಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ತಿರುವನಂತಪುರಂ: ಕೇರಳದ ಮಲಂಕರಾ ಆಕ್ಸ್‌ಫರ್ಡ್‌ ಸಿರಿಯನ್‌ ಚರ್ಚ್ ಐವರು ಪಾದ್ರಿಗಳು ಮಹಿಳೆಯೊಬ್ಬಳನ್ನು ಬ್ಲ್ಯಾಕ್‌ಮೇಲ್‌ ಮಾಡಿ ಲೈಂಗಿಕ ದೌರ್ಜನ್ಯವೆಸಗಿರುವ ಪ್ರಕರಣ ಬೆಳಕಿಗೆ ಬಂದಿದೆ.

ಮಹಿಳೆಯ ಪತಿ ಪಾದ್ರಿಗಳ ವಿರುದ್ಧ ಮಾಡಿರುವ ಲೈಂಗಿಕ ದೌರ್ಜನ್ಯ ಆರೋಪ ಸಂಬಂಧ ಅಪರಾಧ ವಿಭಾಗದಿಂದ ತನಿಖೆಗೆ ಆದೇಶಿಸಲಾಗಿದೆ. ಸಿಪಿಎಂ ಮುಖಂಡ ಹಾಗೂ ಕೇರಳ ಆಡಳಿತಾತ್ಮಕ ಸುಧಾರಣಾ ಆಯೋಗದ ಅಧ್ಯಕ್ಷ ವಿ.ಎಸ್‌. ಅಚ್ಯುತನಾಥನ್‌ ಅವರು ರಾಜ್ಯ ಪೊಲೀಸ್‌ ಮುಖ್ಯಸ್ಥ ಲೋಕನಾಥ್‌ ಬೆಹ್ರಾ ಅವರಿಗೆ ಪತ್ರವೊಂದನ್ನು ಬರೆದು ತನಿಖೆಗೆ ಆದೇಶಿಸಿದ್ದರು.

ಆರೋಪಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖೆ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.