ಕೇಂದ್ರದ ವಿರುದ್ಧ ಇದೀಗ ಸಿಪಿಎಂನಿಂದಲೂ ಅವಿಶ್ವಾಸ ನಿರ್ಣಯ

First Published 27, Mar 2018, 9:20 AM IST
CPM submits Notice of No Confidence against BJP Government
Highlights

ಆಂಧ್ರಪ್ರದೇಶ ವೈಎಸ್‌ಆರ್‌ ಕಾಂಗ್ರೆಸ್‌, ತೆಲಗು ದೇಶಂ ಪಕ್ಷ ಮತ್ತು ಕಾಂಗ್ರೆಸ್‌ ಬಳಿಕ ಇದೀಗ ಕೇಂದ್ರ ಸರ್ಕಾರದ ವಿರುದ್ಧ ಸಿಪಿಎಂ ಸಹ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದೆ.

ನವದೆಹಲಿ: ಆಂಧ್ರಪ್ರದೇಶ ವೈಎಸ್‌ಆರ್‌ ಕಾಂಗ್ರೆಸ್‌, ತೆಲಗು ದೇಶಂ ಪಕ್ಷ ಮತ್ತು ಕಾಂಗ್ರೆಸ್‌ ಬಳಿಕ ಇದೀಗ ಕೇಂದ್ರ ಸರ್ಕಾರದ ವಿರುದ್ಧ ಸಿಪಿಎಂ ಸಹ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದೆ.

ಸಿಪಿಎಂ ಪಕ್ಷದ ಲೋಕಸಭಾ ನಾಯಕ ಪಿ.ಕರುಣಾಕರನ್‌ ಅವರು ಸೋಮವಾರ ಈ ಕುರಿತಾದ ನೋಟಿಸ್‌ ಅನ್ನು ಲೋಕಸಭೆ ಕಾರ್ಯದರ್ಶಿ ಅವರಿಗೆ ಸಲ್ಲಿಕೆ ಮಾಡಿದ್ದು, ಮಂಗಳವಾರದ ಅಧಿವೇಶನದಲ್ಲಿ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯ ಮಂಡನೆಗೆ ಅವಕಾಶ ನೀಡಬೇಕು ಎಂದು ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರಲ್ಲಿ ಕೋರಿಕೊಳ್ಳಲಾಗಿದೆ.

ಲೋಕಸಭೆಯಲ್ಲಿ ಎನ್‌ಡಿಎ ಸರ್ಕಾರದ ಮೇಲೆ ಒತ್ತಡ ಹೇರುವ ಭಾಗವಾಗಿ ಈ ತಂತ್ರ ಅನುಸರಿಸಲಾಗುತ್ತಿದೆ ಎಂದು ಸಿಪಿಎಂ ಸಂಸದರು ಹೇಳಿದ್ದಾರೆ.

 

loader