ಮಹಾರಾಷ್ಟ್ರ[ಮಾ.05]: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಪಿ. ಚಿದಂಬರಂ ಪ್ರಧಾನಿ ಮೋದಿಯನ್ನು ಹೊಗಳಿದ ಬೆನ್ನಲ್ಲೇ ಸಿಪಿಐಎಂ ನಾಯಕರೊಬ್ಬರು ಮೋದಿಯನ್ನು ಹಾಡಿ ಹೊಗಳಿದ್ದಾರೆ. ಆದರೀಗ ಮೋದಿಯನ್ನು ಹೊಗಳಿದ ಕಾರಣಕ್ಕಾಗಿ ಈ ನಾಯಕನನ್ನು ಸಿಪಿಐಎಂ ಪಕ್ಷದ ಕೇಂದ್ರ ಸಮಿತಿಯಿಂದಲೇ ಹೊರ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ. 

ಲಭ್ಯವಾದ ಮಹಿತಿ ಅನ್ವಯ ಸಿಪಿಐಎಂ ಮಾಜಿ ಶಾಸಕ ನರ್ಸಯ್ಯ ಆಡಂ ಎಂಬವರೇ ಮೋದಿ ಹಾಗೂ ಫಡ್ನವೀಸ್ ರನ್ನು ಹೊಗಳಿದ್ದ ನಾಯಕ ಎಂದು ತಿಳಿದು ಬಂದಿದೆ. ಇಲ್ಲಿನ ಸೋಲಾಪುರ ಜಿಲ್ಲೆಯಲ್ಲಿ ಆವಾಸ್ ಯೋಜನೆಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿತ್ತು. ಹೀಗಾಗಿ ಜನವರಿಯಲ್ಲಿ ಆಡಂರವರು ಮೋದಿ ಹಾಗೂ ಫಡ್ನವೀಸ್ ರನ್ನು ಸಾರ್ವಜನಿಕವಾಗಿಯೇ ಹೊಗಳಿ ಧನ್ಯವಾದ ತಿಳಿಸಿದ್ದರು. ಇಷ್ಟೇ ಅಲ್ಲದೇ ಮೋದಿಯೇ ಮತ್ತೊಮ್ಮೆ ದೇಶದ ಪ್ರಧಾನಿ ಆಗಬೇಕೆಂದು ಶುಭ ಕೋರಿದ್ದರು. ಆಡಂ ಇದೇ ಸೋಲಾಪುರ ಜಿಲ್ಲೆಯ ಶಾಸಕರಾಗಿ ಅಯ್ಕೆಯಾಗಿದ್ದರಂಬುವುದು ಗಮನಾರ್ಹ.

ಮೋದಿ ಸರಕಾರವನ್ನು ಹೊಗಳಿದ ಕಾಂಗ್ರೆಸ್ ಮಾಜಿ ಸಚಿವ ಚಿದಂಬರಂ!

ಸಿಪಿಐಎಂ ಪಕ್ಷದ ಪದಾಧಿಕಾರಿಯೊಬ್ಬರು ಈ ವಿಚಾರವಾಗಿ ಮಾತನಾಡುತ್ತಾ 'ಇಂತಹ ಹೊಗಳುವಿಕೆ ಪಕ್ಷದ ನೀತಿಯ ಉಲ್ಲಂಘನೆಯಗಿದೆ. ಹೀಗಾಗಿ ಅವರನ್ನು ಮುಂದಿನ 3 ತಿಂಗಳವರೆಗೆ ಪಕ್ಷದ ಕೇಂದ್ರ ಸಮಿತಿಯಿಂದ ಅಮಾನತ್ತು ಮಾಡಲು ನಿರ್ಧರಿಸಲಾಗಿದೆ' ಎಂದಿದ್ದಾರೆ. ಆದರೆ ಆಡಂ ಮಾತ್ರ ಈ ಕುರಿತಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.