ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಲು ಬಂದಿದ್ದ ಯೆಚೂರಿ ವಿರುದ್ಧ ಇಬ್ಬರು ದುಷ್ಕರ್ಮಿಗಳು ಮೊದಲಿಗೆ ಘೋಷಣೆಗಳನ್ನು ಕೂಗಿ, ಬಳಿಕ ಹಲ್ಲೆ ನಡೆಸಿದ್ದಾರೆ. ಆದರೆ ಯೆಚೂರಿ ಸುರಕ್ಷಿತರಾಗಿದ್ದಾರೆಂದು ಹೇಳಲಾಗಿದೆ.
ನವದೆಹಲಿ: ಕಮ್ಯೂನಿಸ್ಟ್ ಪಕ್ಷದ ನಾಯಕ ಸೀತರಾಮ್ ಯೆಚೂರಿ ಮೇಲೆ ಇಬ್ಬರು ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಲು ಏ.ಕೆ.ಜಿ. ಭವನಕ್ಕೆ ಬಂದಿದ್ದ ಯೆಚೂರಿ ವಿರುದ್ಧ ಇಬ್ಬರು ದುಷ್ಕರ್ಮಿಗಳು ಮೊದಲಿಗೆ ಘೋಷಣೆಗಳನ್ನು ಕೂಗಿ, ಬಳಿಕ ಹಲ್ಲೆ ನಡೆಸಿದ್ದಾರೆ. ಆದರೆ ಯೆಚೂರಿ ಸುರಕ್ಷಿತರಾಗಿದ್ದಾರೆಂದು ಹೇಳಲಾಗಿದೆ.
ಹಲ್ಲೆ ನಡೆಸಿರುವುದಕ್ಕೆ ಪ್ರತಿಕ್ರಿಯಿಸಿದ ಯೆಚೂರಿ, ನಮ್ಮ ಧ್ವನಿಯನ್ನು ಹತ್ತಿಕ್ಕುವ ಸಂಘ ಪರಿವಾರದ ಗೂಂಡಾಗಳ ಿಂತಹ ಪ್ರಯತ್ನಗಳಿಗೆ ನಾವು ಹೆದರುವವರಲ್ಲವೆಂದು ಹೇಳಿದ್ದಾರೆ.
ಯೆಚೂರಿ ಮೇಲೆ ಹಲ್ಲೆಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತೀವ್ರವಾಗಿ ಖಂಡಿಸಿದ್ದಾರೆ. ಯೆಚೂರಿ ಮೇಲೆ ನಡೆಸಲಾದ ಹಲ್ಲೆ ದೇಶದ ಪ್ರಜಾತಂತ್ರದ ಮೇಲೆ ಹಲ್ಲೆಯೆಂದು ಅವರು ಹೇಳಿದ್ದಾರೆ.
