2019ರ ಲೋಕಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಗೆ ಬಿಗ್ ಶಾಕ್ ದೊರಕಿದಂತಾಗಿದೆ. ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಕೂಟ ರಚನೆಯ ಯತ್ನದಲ್ಲಿದ್ದ ಕಾಂಗ್ರೆಸ್ ನೊಂದಿಗೆ ಸಿಪಿಎಂ ಮೈತ್ರಿ ನಿರಾಕರಿಸಿದೆ. 

ನವದೆಹಲಿ: 2019ರ ಲೋಕಸಭಾ ಚುನಾವಣೆಗೂ ಮುನ್ನ ಮಹಾ ಮೈತ್ರಿಕೂಟ ರಚಿಸಿಸುವ ಕಾಂಗ್ರೆಸ್‌ ಯತ್ನಕ್ಕೆ ಮತ್ತೊಂದು ಪೆಟ್ಟುಬಿದ್ದಿದೆ. ಚುನಾವಣೆಗೂ ಮುನ್ನು ಮೈತ್ರಿಕೂಟದ ಸಾಧ್ಯತೆ ಇಲ್ಲ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಸ್ಪಷ್ಟಪಡಿಸಿದ್ದಾರೆ. 

ಒಂದು ದೇಶವಾಗಿ ಭಾರತದ ಸ್ವರೂಪ ಮತ್ತು ಸ್ವಭಾವದ ಬಗ್ಗೆ ಅರ್ಥೈಸಿಕೊಳ್ಳಬೇಕು. ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಸಾಮಾನ್ಯವಾಗಿ ಪ್ರಾದೇಶಿಕವಾಗಿ ಆಯಾ ಪಕ್ಷಗಳು ಮೇಲುಗೈ ಸಾಧಿಸುತ್ತವೆ. 

ಹಾಗಾಗಿ, ರಾಷ್ಟ್ರೀಯ ಮಟ್ಟದಲ್ಲಿ ಪ್ರತಿಪಕ್ಷಗಳನ್ನು ಒಂದಾಗಿರುವುದು ಸಾಧ್ಯವೇ ಇಲ್ಲ, ಎಂದಿದ್ದಾರೆ. ಇದಕ್ಕೂ ಮುನ್ನ ಬಿಎಸ್‌ಪಿ, ಎಸ್‌ಪಿ, ಟಿಎಂಸಿ, ಎನ್‌ಸಿಪಿ ನಾಯಕರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು.