Asianet Suvarna News Asianet Suvarna News

ಉತ್ತರ ಪ್ರದೇಶದಲ್ಲಿ ಗೋಹಂತಕರ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆ!

ಹಾಲು ಕೊಡುವ ಗೋವುಗಳ ಅಕ್ರಮ ಸಾಗಾಟ ಹಾಗೂ ಅಕ್ರಮ ವಧೆ ಮಾಡಿದ್ದು ಕಂಡುಬಂದರೆ ಅಂಥವರ ಮೇಲೆ ಭಾರಿ ಕಠಿಣವಾದ ರಾಷ್ಟ್ರೀಯ ಭದ್ರತಾ ಕಾಯ್ದೆ ಹಾಗೂ ಗೂಂಡಾ ಕಾಯ್ದೆಯನ್ವಯ ಕ್ರಮ ಜರುಗಿಸಲು ಎಲ್ಲ ಜಿಲ್ಲಾ ಪೊಲೀಸರಿಗೆ ಸೂಚಿಸಲಾಗಿದೆ ಎಂದು ಡಿಜಿಪಿ ಸುಲ್ಖನ್‌ ಸಿಂಗ್‌ ಹೇಳಿದರು.

Cow Slaughtering Will Attract Cases Under NSA in Uttar Pradesh

ಲಖನೌ: ಕೇಂದ್ರ ಸರ್ಕಾರವು ಗೋ ಮಾರಾಟದ ಮೇಲೆ ಕೆಲವು ಕಠಿಣ ನಿರ್ಬಂಧಗಳನ್ನು ಹೇರಿದ ಬೆನ್ನಲ್ಲೇ ಉತ್ತರಪ್ರದೇಶದಲ್ಲಿ ಕೂಡ ಕಠಿಣ ಕ್ರಮಗಳನ್ನು ಗೋಹಂತಕರ ಮೇಲೆ ಜರುಗಿಸಲು ನಿರ್ಧರಿಸಲಾಗಿದೆ.

ಹಾಲು ಕೊಡುವ ಗೋವುಗಳ ಅಕ್ರಮ ಸಾಗಾಟ ಹಾಗೂ ಅಕ್ರಮ ವಧೆ ಮಾಡಿದ್ದು ಕಂಡುಬಂದರೆ ಅಂಥವರ ಮೇಲೆ ಭಾರಿ ಕಠಿಣವಾದ ರಾಷ್ಟ್ರೀಯ ಭದ್ರತಾ ಕಾಯ್ದೆ ಹಾಗೂ ಗೂಂಡಾ ಕಾಯ್ದೆಯನ್ವಯ ಕ್ರಮ ಜರುಗಿಸಲು ಎಲ್ಲ ಜಿಲ್ಲಾ ಪೊಲೀಸರಿಗೆ ಸೂಚಿಸಲಾಗಿದೆ ಎಂದು ಡಿಜಿಪಿ ಸುಲ್ಖನ್‌ ಸಿಂಗ್‌ ಹೇಳಿದರು.

ಭದ್ರತಾ ಕಾಯ್ದೆ ಮತ್ತು ಗೂಂಡಾ ಕಾಯ್ದೆಯನ್ವಯ ಬಂಧಿತನಾದ ವ್ಯಕ್ತಿಯನ್ನು ಎಷ್ಟು ಬೇಕಾದಷ್ಟು ದಿನವಾದರೂ ಪೊಲೀಸರು ಬಂಧಿಸದೇ ತಮ್ಮ ವಶದಲ್ಲಿ ಇಟ್ಟುಕೊಳ್ಳಬಹುದು ಮತ್ತು ಬಂಧನಕ್ಕೆ ಕಾರಣ ತಿಳಿಸಲೇಬೇಕು ಎಂದೇನಿಲ್ಲ.

Latest Videos
Follow Us:
Download App:
  • android
  • ios