Asianet Suvarna News Asianet Suvarna News

ಡೆಡ್ಲಿ ಸ್ವೀಟ್ಸ್: ಫಳಫಳ ಹೊಳೆಯುತ್ತೆಂದು ಮಾರುಹೋಗದಿರಿ - ಕವರ್ ಸ್ಟೋರಿ

ಸ್ವೀಟ್​ ಖರೀದಿಸಲು ಹೊರಟಿದ್ದೀರಾ? ಫಳ ಫಳ ಹೊಳೆಯೋ ಸಿಹಿ ತಿಂಡಿಗೆ ಮರಳಾಗಿದ್ದೀರಾ?ಹಾಗಾದ್ರೆ ನಿಲ್ಲಿ, ನಮ್ಮ ಕವರ್​ ಸ್ಟೋರಿ ತಂಡ ಮಾಡಿದ ವರದಿಯನ್ನ ಒಮ್ಮೆ ನೋಡಿ. ಆಗ ನಿಮಗೆ ಕಿಲ್ಲರ್​ ಸ್ವೀಟ್​ನ ಸೀಕ್ರೆಟ್​ ಗೊತ್ತಾಗುತ್ತೆ.

cover story on dangers of silver sheet in sweets

ಬೆಂಗಳೂರು(ಅ. 29): ಸ್ನೇಹಿತರೇ ಎಚ್ಚರ .. ಎಚ್ಚರ! ಶೈನಿಂಗ್​ ಸ್ವೀಟ್ ಬಗ್ಗೆ ಕೇರ್​ಫುಲ್​... ತಿಂದ್ರೆ ಬರುತ್ತೆ ಮಾರಕ ಕಾಯಿಲೆ... ಹೌದು, ಈಗ ಮಾರುಕಟ್ಟೇಲಿ ತುಂಬಾ ಶೈನಿಂಗ್​ ಸ್ವೀಟ್'​ನದ್ದೇ ದರ್ಬಾರು. ಪ್ರತಿ ಸ್ವೀಟ್ ಮೇಲೂ ಫಳ ಫಳ ಹೊಳೆಯೋ ಬೆಳ್ಳಿ ಪತ್ರದ ಅಲಂಕಾರ. ಗ್ರಾಹಕರು ಕೂಡ ಈ ಬೆಳ್ಳಿ ಕವಚದ ಸ್ವೀಟ್ಸ್'​ನ್ನೇ ಡಿಮ್ಯಾಂಡ್​ ಮಾಡುತ್ತಾರೆ. ಆದ್ರೆ ನಿಮಗೆ ತಿಳಿದಿರಲಿ, ಸ್ವೀಟ್​ ಕಲರ್'​ಫುಲ್​ ಆಗಿ ಕಾಣಲು ಬಳಸುವ ಈ ವರಕ್ ಅಥವಾ ಬೆಳ್ಳಿ ಹಾಳೆ​ ಮನುಷ್ಯನ ದೇಹಕ್ಕೆ ಅನಗತ್ಯ. ಆಹಾರದೊಳಗೆ ಬಳಸಿದರೆ ಅದು ಶೇಕಡಾ 99.9 ರಷ್ಟು ಶುದ್ಧವಾಗಿರಬೇಕು. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.

ಬೆಳ್ಳಿ ಪ್ಯೂರ್​ ಆಗಿದ್ರೆಯೇ ದೇಹಕ್ಕೆ ಅಪಾಯ ತಂದೊಡ್ಡುತ್ತದೆ. ಇನ್ನು ಅದರೊಳಗೆ ಅಲ್ಯೂಮಿನಿಯಂ, ಸೀಸ ಮೊದಲಾದವುಗಳಿಂದ ಕಲಬೆರಕೆ ಮಾಡಿದ್ರೆ ಆರೋಗ್ಯಕ್ಕೆ ಭಾರೀ ಡೇಂಜರ್​. ಇದಕ್ಕಿಂತಲೂ ಮುಖ್ಯವಾಗಿ ಈ ಬೆಳ್ಳಿ ಪತ್ರಕ್ಕೆ ಮಾಂಸದ ಕಲಬೆರಕೆಯೂ ಆಗಿರುತ್ತದೆ.

- ವಿಜಯಲಕ್ಷ್ಮಿ ಶಿಬರೂರು, ಸುವರ್ಣ ನ್ಯೂಸ್​​

Follow Us:
Download App:
  • android
  • ios