ಪೆಟ್ರೋಲ್​ ಬಂಕ್​ನವರು ನಿಮಗೆ ಗೊತ್ತಿಲ್ಲದೇ ನಿಮ್ಮ ಜೇಬಿಗೆ ಕನ್ನ ಹಾಕಿ , ಕೊಟ್ಯಾಂತರ ರೂಪಾಯಿ ಲೂಟಿ ಮಾಡುತ್ತಿದ್ದಾರೆ.

ರಾಜ್ಯದ ಕೆಲ ಪೆಟ್ರೋಲ್​ ಬಂಕ್​ಗಳು ಮಾಡುತ್ತಿರೋ ಭಾರೀ ವಂಚನೆಯೊಂದನ್ನ ಸುವರ್ಣ ನ್ಯೂಸ್​ ಕವರ್​ಸ್ಟೋರಿ ತಂಡ ಬಯಲು ಮಾಡಿದೆ.

ಬಂಕ್​ ಮಾಲೀಕರು ಅಳತೆಯಲ್ಲಿ ಮೋಸ ಮಾಡಿ ಗ್ರಾಹಕರನ್ನ ಲೂಟಿ ಹೊಡಿತ್ತಿದ್ದಾರೆ. ಅದು ಹೇಗೆ ಅನ್ನೋದನ್ನ ಕವರ್​ಸ್ಟೋರಿ ತಂಡ ರಿಯಾಲಿಟಿ ಚೆಕ್​ನಲ್ಲಿ ಪತ್ತೆಹಚ್ಚಿದೆ. ನಮ್ಮ ರಾಜ್ಯದ ಹೆಚ್ಚಿನ ಪೆಟ್ರೋಲ್​ ಬಂಕ್​ಗಳಲ್ಲಿ ಭರ್ಜರಿ ಮೋಸ ನಡೀತಿದೆ. ಪೆಟ್ರೋಲ್​ ಬಂಕ್​ನವರು ನಿಮಗೆ ಗೊತ್ತಿಲ್ಲದೇ ನಿಮ್ಮ ಜೇಬಿಗೆ ಕನ್ನ ಹಾಕಿ , ಕೊಟ್ಯಾಂತರ ರೂಪಾಯಿ ಲೂಟಿ ಮಾಡುತ್ತಿದ್ದಾರೆ.

ನಾವು ರಾಜಧಾನಿ ಬೆಂಗಳೂರು ಹಾಗೂ ಸುತ್ತಮುತ್ತಲ ಜಿಲ್ಲೆಯ 50ಕ್ಕೂ ಹೆಚ್ಚು ಪೆಟ್ರೋಲ್​ ಬಂಕ್​ಗಳಿಗೆ ಭೇಟಿ ಕೊಟ್ಟು ರಹಸ್ಯ ಕಾರ್ಯಾಚರಣೆ ಮಾಡಿದ್ವಿ. ಹೆಚ್ಚಿನ ಬಂಕ್​ಗಳು 5 ಲೀಟರ್​ಗೆ 25 ಎಂಎಲ್​ಗೂ ಹೆಚ್ಚು ಪ್ರಮಾಣದ ಇಂಧನ ಮೋಸ ಮಾಡ್ತಿರೋದು ಬೆಳಕಿಗೆ ಬಂತು.

ಈ ರೀತಿಯ ವಂಚನೆಗೆ ಮಾಪನ ಇಲಾಖೆಯ ಅಧಿಕಾರಿಗಳೇ ಅವಕಾಶ ಮಾಡಿಕೊಟ್ಟಿದ್ದಾರೆ ಅನ್ನೋದು ಬಂಕ್​ ಸಿಬ್ಬಂದಿ ವಾದ. ಆದರೆ ಮಾಪನ ಅಧಿಕಾರಿಗಳು ಕೊಡೋ ಸ್ಪಷ್ಟನೆಯೇ ಬೇರೆ. ಒಟ್ಟಾರೆ ಪೆಟ್ರೋಲ್​ ಬಂಕ್​ಗಳು ನಾನಾ ರೀತಿಯಲ್ಲಿ ಗ್ರಾಹಕರನ್ನ ವಂಚಿಸ್ತಿದ್ದಾರೆ. ಆದರೆ ಈ ಬಗ್ಗೆ ಮಾಪನ ಇಲಾಖೆಯ ಅಧಿಕಾರಿಗಳು ಮಾತ್ರ ಬಂಕ್​ ಮಾಲೀಕರು ಕೊಡೋ ಲಂಚಾ ತಿಂದು ಸೌಖ್ಯವಾಗಿದ್ದಾರೆ. ಇದು ಅತ್ಯಂತ ನಾಚಿಕೆಗೇಡಿನ ವಿಚಾರ.

ವರದಿ: ವಿಜಯಲಕ್ಷ್ಮಿ ಶಿಬರೂರು, ಸುವರ್ಣ ನ್ಯೂಸ್​