ಈ ಕಟು ಸತ್ಯವನ್ನ ಕಂಡು ಹಿಡಿದಿದೆ ಸುವರ್ಣ ನ್ಯೂಸ್​ನ ಕವರ್​ಸ್ಟೋರಿ ತಂಡ. ನಮ್ಮದು ದೇಸಿ ತುಪ್ಪ , ಅತ್ಯಂತ ಪರಿಶುದ್ಧ ಅಂತ ಹೇಳಿ ಜನರಿಗೆ ಮೋಸ ಮಾಡಿ ನಕಲಿ ವಿಷಕಾರಿ ತುಪ್ಪವನ್ನ ಜನರಿಗೆ ಮಾರುತ್ತಿರೋ ದೊಡ್ಡ ಮಾಫಿಯಾ ನಮ್ಮ ರಾಜಧಾನಿ ಬೆಂಗಳೂರಿನಲ್ಲೇ ಆಕ್ಟೀವ್​ ಆಗಿದೆ.

ವಿಷ ಆಹಾರ ಮಾಫಿಯಾ ನಮ್ಮ ಜೀವದ ಜೊತೆ ನಿತ್ಯ ಹೇಗೆಲ್ಲಾ ಚಲ್ಲಾಟ ಆಡ್ತಿದೆ ಅನ್ನೋದಕ್ಕೆ ನಮ್ಮ ಕವರ್​ಸ್ಟೋರಿ ತಂಡ ಈ ಬಾರಿ ನಡೆಸಿದ ರಹಸ್ಯ ಕಾರ್ಯಾಚರಣೆಯೇ ಸಾಕ್ಷಿ.

ಆರೋಗ್ಯಕ್ಕೆ ಅಮೃತ ಅಂತ ತಿಳಿದಿದ್ದ ದೇಸಿ ತುಪ್ಪವನ್ನೂ ಕಲಬೆರಕೆ ಮಾಫಿಯಾ ನಕಲಿ ಮಾಡಿದೆ. ಆ ಮೂಲಕ ಜನರಿಗೆ ವಿಷವುಣಿಸಸ್ತಿದೆ. ದೇಸಿ ತುಪ್ಪ ಅಮೃತ. ಅದು ದೇಹದ ಆರೋಗ್ಯಕ್ಕೆ ಪೂರಕ. ಮಕ್ಕಳ ಬೆಳವಣಿಗೆಗೆ ಅತ್ಯವಶ್ಯ. ಆದರೆ ಇದೇ ಅಮೃತಕ್ಕೆ ವಿಷ ಹಾಕ್ತಿದೆ ಕಲಬೆರಕೆ ಮಾಫಿಯಾ. ಈ ಕಟು ಸತ್ಯವನ್ನ ಕಂಡು ಹಿಡಿದಿದೆ ಸುವರ್ಣ ನ್ಯೂಸ್​ನ ಕವರ್​ಸ್ಟೋರಿ ತಂಡ.

ನಮ್ಮದು ದೇಸಿ ತುಪ್ಪ , ಅತ್ಯಂತ ಪರಿಶುದ್ಧ ಅಂತ ಹೇಳಿ ಜನರಿಗೆ ಮೋಸ ಮಾಡಿ ನಕಲಿ ವಿಷಕಾರಿ ತುಪ್ಪವನ್ನ ಜನರಿಗೆ ಮಾರುತ್ತಿರೋ ದೊಡ್ಡ ಮಾಫಿಯಾ ನಮ್ಮ ರಾಜಧಾನಿ ಬೆಂಗಳೂರಿನಲ್ಲೇ ಆಕ್ಟೀವ್​ ಆಗಿದೆ.ಈ ನಕಲಿ ತುಪ್ಪ ಮಾರಾಟಗಾರರ ನಾನಾ ಗೋಡೌನ್​​ಗಳಲ್ಲಿ ರಹಸ್ಯ ಕಾರ್ಯಾಚರಣೆ ಮಾಡಿತು ಕವರ್​ಸ್ಟೋರಿ ತಂಡ.

ಅಲ್ಲಿ ತಯಾರಾಗೋ ತುಪ್ಪದ ಸ್ಯಾಂಪಲನ್ನೂ ಆಹಾರ ಸುರಕ್ಷತಾ ಇಲಾಖೆಯ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿಸಿತು. ಫಲಿತಾಂಶ ಮಾತ್ರ ಆತಂಕಕಾರಿಯಾಗಿತ್ತು. ಈ ತುಪ್ಪಗಳು ಸೇವನೆಗೆ ಯೋಗ್ಯವೇ ಅಲ್ಲ. ಇದರೊಳಗೆ ಬೇರೆ ಪ್ರಾಣಕ್ಕೆ ಎರವಾಗುವ ಕೊಬ್ಬು ಸೇರಿಸಿದ್ದಾರೆ ಅನ್ನೋ ವರದಿ ಬಂತು. ಜನರಿಗೆ ಮೋಸ ಮಾಡೋ ಈ ನಕಲಿ ತುಪ್ಪ ಮಾರಾಟಗಾರರ ವಿರುದ್ಧ ನಾವು ಆಹಾರ ಸುರಕ್ಷತಾ ಅಧಿಕಾರಿಗಳಿಗೆ ದೂರು ಕೊಟ್ಟೆವು. ಅವರು ತಕ್ಷಣ ಈ ಅಂಗಡಿಗಳಿಗೆ ದಾಳಿ ಮಾಡಿದರು.

ಈ ನಕಲಿ ತುಪ್ಪ ಮಾರಾಟಗಾರರ ಬಳಿ ಆಹಾರ ಸುರಕ್ಷತಾ ಇಲಾಖೆಯ ಪರವಾನಗಿಯೇ ಇಲ್ಲ. ಅಲ್ಲದೆ ಇವರು ಎಫ್​ಎಸ್​ಎಸ್​ಎಐಯ ಎಲ್ಲಾ ನಿಯಮಗಳನ್ನ ಗಾಳಿಗೆ ತೂರಿ ದಂಧೆ ಮಾಡುತ್ತಿರೋದು ಗಮನಕ್ಕೆ ಬಂತು. ಇವರಿಗೆ ನೋಟೀಸ್ ನೀಡಿದ ಅಧಿಕಾರಿಗಳು, ಸ್ಯಾಂಪಲ್​ ಪಡೆದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ವರದಿ: ವಿಜಯಲಕ್ಷ್ಮಿ ಶಿಬರೂರು, ಸುವರ್ಣ ನ್ಯೂಸ್​