Asianet Suvarna News Asianet Suvarna News

ಸ್ನೇಹಿತನ ಪತ್ನಿಯನ್ನೇ ಅತ್ಯಾಚಾರ ಮಾಡಿದ್ರಾ ಮಾಜಿ ಸಚಿವರು? ಕೋರ್ಟ್ ಬರೆಯಲಿದೆ ಹಾಲಪ್ಪರ ಹಣೆಬರಹ

ಸ್ನೇಹಿತನ ಪತ್ನಿ ಮೇಲೆ ಅತ್ಯಾಚಾರ ಎಸಗಿರುವ ಆರೋಪಕ್ಕೆ ಗುರಿಯಾಗಿರುವ ಮಾಜಿ ಸಚಿವ ಹರತಾಳು ಹಾಲಪ್ಪನವರ ಭವಿಷ್ಯ ಇಂದು ನಿರ್ಧಾರವಾಗಲಿದೆ. 7 ವರ್ಷಗಳ ನಿರಂತರ ವಿಚಾರಣೆ ನಂತರ ಇಂದು ಕೋರ್ಟ್ ತೀರ್ಪು ಪ್ರಕಟಿಸಲಿದೆ. ಈ ಕುರಿತು ಒಂದು ಎಕ್ಸ್ ಕ್ಲೂಸಿವ್ ವರದಿ ಇಲ್ಲಿದೆ.

Court Will Announce The Verdict On Halappa Case

ಶಿವಮೊಗ್ಗ(ಆ.08): ಸ್ನೇಹಿತನ ಪತ್ನಿಯ ಮೇಲೆಯೇ ಅತ್ಯಾಚಾರ ಎಸಗಿದ್ದ ಆರೋಪಕ್ಕೆ ಗುರಿಯಾಗಿ ಸಚಿವ ಸ್ಥಾನವನ್ನೇ ಕಳೆದುಕೊಂಡಿದ್ದ ಹರತಾಳು ಹಾಲಪ್ಪ ಭವಿಷ್ಯಕ್ಕೆ ಕೋರ್ಟ್ ಇಂದು ಷಾರ ಹಾಕಲಿದೆ. ಯಡಿಯೂರಪ್ಪ ಸಂಪುಟದಲ್ಲಿ ಆಹಾರ ಸಚಿವರಾಗಿದ್ದ ಹರತಾಳು ಹಾಲಪ್ಪ ಅತ್ಯಾಚಾರ ಪ್ರಕರಣ ಶಿವಮೊಗ್ಗ ಕೋರ್ಟ್ ನಲ್ಲಿ ಕಳೆದ 7 ವರ್ಷಗಳಿಂದ ನಿರಂತರವಾಗಿ ನಡೆಯುತ್ತಲೇ ಬಂದಿತ್ತು.

ನವೆಂಬರ್​ 26 -2009ರಂದು ಹರತಾಳು ಹಾಲಪ್ಪ ವಿರುದ್ದ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ಕೈಗೆತ್ತಿಗೊಂಡಿದ್ದ ಸಿಐಡಿ ಪೋಲಿಸರು 10 ತಿಂಗಳ ಬಳಿಕ ನ್ಯಾಯಾಲಯಕ್ಕೆ ಚಾರ್ಜ್​ಶೀಟ್ ಸಲ್ಲಿಸಿದ್ದರು. ಇದೀಗ ಅತ್ಯಾಚಾರಕ್ಕೊಳ್ಳಗಾಗಿದ್ದ ಚಂದ್ರಾವತಿ , ಮತ್ತವಳ ಪತಿ ವೆಂಕಟೇಶಮೂರ್ತಿ ಸೇರಿದಂತೆ ಹಲವರ ವಿಚಾರಣೆ ನಡೆಸಿರುವ ನ್ಯಾಯಾಲಯ ಪ್ರಕರಣದ ಕುರಿತು ವಾದಿ - ಪ್ರತಿವಾದಿಗಳ ವಾದವನ್ನು ಅಲಿಸಿ ಇಂದು ತೀರ್ಪು ನೀಡಲಿದೆ.

ಅಂದು ನಡೆದಿದ್ದೇನು..?

* ನವೆಂಬರ್​ 26- 2009 - ಹರತಾಳು ಹಾಲಪ್ಪ ವಿರುದ್ಧ ಅತ್ಯಾಚಾರ ಆರೋಪ

* ಮೇ-2, 2010- ಹಾಲಪ್ಪರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ

* ಮೇ -3, 2010- ವೆಂಕಟೇಶ್​ಮೂರ್ತಿ ಪತ್ನಿಯಿಂದ ವಿನೋಬನಗರದಲ್ಲಿ ದೂರು ದಾಖಲು

* ಮೇ - 10, 2010- ಪೊಲೀಸರಿಗೆ ಶರಣಾದ ಹಾಲಪ್ಪ

* ಮೇ-10, 2010 ರ ನಂತರ ನ್ಯಾಯಾಂಗ ಬಂಧನ-  ಜಾಮೀನಿನ ಮೇಲೆ ಬಿಡುಗಡೆ

* ಮಾರ್ಚ್​ 8, 2011 ರಂದು ಹೈಕೋರ್ಟ್​ನಲ್ಲಿ ವಿಚಾರಣೆ

* ಮಾರ್ಚ್​ 30, 2011 ರಂದು 3ನೇ ಹೆಚ್ಚುವರಿ ಜೆಎಂಎಫ್ ಸಿ ಕೋರ್ಟ್​ಗೆ ಆರೋಪ ಪಟ್ಟಿ ಸಲ್ಲಿಕೆ

* ಮಾರ್ಚ್​ 31, 2011 ರೊಳಗೆ ಸಂಬಂಧಿಸಿದ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸಿಐಡಿಗೆ ಸೂಚನೆ

* ಸತತ 7 ವರ್ಷಗಳ ಬಳಿಕ ಇಂದು ಶಿವಮೊಗ್ಗ ಕೋರ್ಟ್​ನಿಂದ ಮಹತ್ವದ ತೀರ್ಪು

ಸುದೀರ್ಘ ತನಿಖೆಯ ನಂತರ ಸಿಐಡಿ ತಂಡ ಒಟ್ಟು 856 ಪುಟಗಳ ತನಿಖಾ ವರದಿಯನ್ನು ಸಲ್ಲಿಸಿತ್ತು. ಅಲ್ಲದೆ ವಿಚಾರಣೆ ಹಂತದಲ್ಲಿ ವಶಕ್ಕೆ ಪಡೆದಿದ್ದ ಸಿಡಿ, ಮೊಬೈಲ್​ ಸೇರಿದಂತೆ ಮತ್ತೀತರ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ನಡುವೆ ನಾನಾ ರೀತಿಯಲ್ಲಿ ಕಾನೂನು ಹೋರಾಟ ನಡೆದ್ರು 7 ವರ್ಷಗಳ ನಂತರ ವಿಚಾರಣೆ ಪೂರ್ಣಗೊಂಡು ಇಂದು ಶಿವಮೊಗ್ಗದ ಜೆಎಂಎಫ್ ಸಿ ಕೋರ್ಟ್ ತೀರ್ಪು ಪ್ರಕಟಿಸುತ್ತಿದೆ.

Follow Us:
Download App:
  • android
  • ios