ಅತ್ಯಾಚಾರಿ ಕಾಮುಕ ರಾಮ್ ರಹೀಂ ಸಿಂಗ್ ಬಾಬ ಅತ್ಯಚಾರ ಪ್ರಕರಣದ ತೀರ್ಪು ಇಂದು ಪ್ರಕಟವಾಗಲ್ಲಿದೆ. ಈ ಹಿನ್ನಲೇ ಕಾಮುಕ ಬಾಬನ ಬೆಂಬಲಿಗರು ಮತ್ತೆ ಪುಂಡಾಟ ತೋರುವ ಸಾಧ್ಯತೆ ಇರುವ ಹಿನ್ನಲೆ ಹರಿಯಾಣ, ಪಂಜಾಬ, ದೆಹಲಿಯಲ್ಲಿ ಹೈ ಅಲರ್ಟ್ ಕೈಗೊಳ್ಳಲಾಗಿದ್ದು, ಈ ಕುರಿತ ಕಂಪ್ಲೀಟ್ ವರದಿ ಇಲ್ಲಿದೆ ನೋಡಿ.
ಹರ್ಯಾಣ(ಆ.28): ಇದು ಆಗಸ್ಟ್ 25ರಂದು ಬಾಬಾ ಗರ್ಮಿತ್ ರಾಮ್ ರಹಿಮ್ ಸಿಂಗ್ ವಿರುದ್ಧ ತೀರ್ಪು ಬಂದಾಗ ಬಾಬಾ ಬೆಂಬಲಿಗರು ಹಿಂಸಾಚಾರ ನಡೆಸಿದ್ದರು. ಈ ಗಲಭೆಯಲ್ಲಿ 32ಕ್ಕೂ ಹೆಚ್ಚು ಮಂದಿ ಅಮಾಯಕರು ಪ್ರಾಣಬಿಟ್ಟಿದ್ದಾರೆ. ಇಂದು ಅದೇ ರೇಪಿಸ್ಟ್ ಬಾಬಾಗೆ ಶಿಕ್ಷೆ ಪ್ರಮಾಣ ಪ್ರಕಟವಾಗಲಿದೆ. ಹೀಗಾಗೇ ಹರಿಯಾಣ, ಪಂಜಾಬ್, ದೆಹಲಿ, ರಾಜಸ್ಥಾನ್, ಉತ್ತರ ಪ್ರದೇಶ ಈ ಐದು ರಾಜ್ಯಗಳಲ್ಲೂ ಮುನ್ನೆಚ್ಚರಿಕಾ ಕ್ರಮವಾಗಿ ಭಾರೀ ಭದ್ರತೆ ಕೈಗೊಳ್ಳಲಾಗಿದೆ.
ಪಂಚರಾಜ್ಯಗಳಲ್ಲಿ ಟೈಟ್ ಸೆಕ್ಯೂರಿಟಿ!
ಇಂದು ಶಿಕ್ಷೆ ಪ್ರಮಾಣ ಪ್ರಕಟ ಹಿನ್ನೆಲೆಯಲ್ಲಿ ಬಾಬಾ ಬೆಂಬಲಿಗರಿಂದ ಗಲಾಟೆಗೆ ಒಳಗಾಗಿದ್ದ ಹರಿಯಾಣ, ಪಂಜಾಬ್, ದೆಹಲಿ, ರಾಜಸ್ಥಾನ್, ಉತ್ತರ ಪ್ರದೇಶದಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ರಾಜ್ಯ ಪೊಲೀಸರು ಸೇರಿ ಕೇಂದ್ರ ಮೀಸಲು ಪಡೆ ಸರ್ಪಗಾವಲು ಹಾಕಲಾಗಿದೆ. ಇನ್ನೂ ಡೇರಾ ಸಚ್ ಸೌಧ ಪ್ರಧಾನ ಆಶ್ರಮ ಸೇರಿ 35ಕ್ಕೂ ಹೆಚ್ಚು ಆಶ್ರಮಗಳಿಗೆ ಬೀಗ ಹಾಕಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಪ್ರಧಾನ ಆಶ್ರಮವನ್ನು ಸೇನೆ ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ಇನ್ನೂ ಬಾಬಾಗೆ ಸೇರಿದ ಎಲ್ಲಾ ಸಂಸ್ಥೆಗಳಲ್ಲೂ ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಇನ್ನೂ ಹರಿಯಾಣದ ಸಿರ್ಸಾ, ರೋಹ್ಟಕ್ನಲ್ಲಿ ನಿಷೇಧಾಜ್ಞೆ ಮುಂದುವರಿಸಲಾಗಿದ್ದು, ಸಿರ್ಸಾ, ರೋಹ್ಟಕ್'ನಲ್ಲಿ ಶಾಲಾ, ಕಾಲೇಜುಗಳಿಗೆ ರಜೆ ಘೊಷಣೆ ಮಾಡಲಾಗಿದೆ. ಜೊತೆಗೆ ಶಿಕ್ಷೆ ಪ್ರಕಟಿಸಲಿರುವ ನ್ಯಾ. ಜಗದೀಪ್ ಸಿಂಗ್ ಅವರಿಗೆ ಝೆಡ್ ಪ್ಲಸ್ ಭದ್ರತೆ ಒದಗಿಸಲಾಗಿದೆ.
ಒಟ್ಟಿನಲ್ಲಿ ಮೊನ್ನೆ ನಡೆದ ಬಾಬಾ ಬೆಂಬಲಿಗರ ಪುಂಡಾಟದಿಂದ ರಾಜ್ಯ ಸರ್ಕಾರಗಲು ಎಚ್ಚೆತ್ತುಕೊಂಡಿವೆ.. ಬಾಬಾ ಶಿಕ್ಷೆ ಪ್ರಮಾಣ ಪ್ರಕಟಕ್ಕೂ ಮುನ್ನವೇ ಮುಂಜಾಗೃತಕ್ರಮವಾಗಿ ಭಾರೀ ಭದ್ರತೆ ಕೈಗೊಳ್ಳಲಾಗಿದೆ.
