2002ರ ನರೋಡಾ ಗಾಮ್ ಹಿಂಸಾಚಾರ ಸಂಬಂಧ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ವಿಶೇಷ ಎಸ್‌ಐಟಿ ಕೋರ್ಟ್‌ವೊಂದು ಮಂಗಳವಾರ ಸಮನ್ಸ್ ಜಾರಿ ಮಾಡಿದೆ.

ಅಹಮದಾಬಾದ್: 2002ರ ನರೋಡಾ ಗಾಮ್ ಹಿಂಸಾಚಾರ ಸಂಬಂಧ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ವಿಶೇಷ ಎಸ್‌ಐಟಿ ಕೋರ್ಟ್‌ವೊಂದು ಮಂಗಳವಾರ ಸಮನ್ಸ್ ಜಾರಿ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರಕರಣದ ಪ್ರಮುಖ ಆರೋಪಿ ಗುಜರಾತ್ ಮಾಜಿ ಸಚಿವೆ ಮಾಯಾ ಕೊಡ್ನಾನಿ ಪರ ಸಾಕ್ಷಿಯಾಗಿ ಕೋರ್ಟ್‌ಗೆ ಸೆ.18ರಂದು ಹಾಜರಾಗಲು ತಿಳಿಸಿದೆ.

ನಿಗದಿತ ದಿನಾಂಕದಂದು ಶಾ ಕೋರ್ಟ್ಗೆ ಹಾಜರಾಗದಿದ್ದರೆ ಮತ್ತೊಮ್ಮೆ ಸಮನ್ಸ್ ಜಾರಿ ಮಾಡಲ್ಲ ಎಂದಿದೆ. ಕೊಡ್ನಾನಿ ವಕೀಲ ಅಮಿತ್ ಪಟೇಲ್, ಅಹಮದಾಬಾದ್‌ನ ನಗರದ ಥಾಲ್ ತೇಜ್ ಪ್ರದೇಶದಲ್ಲಿರುವ ಶಾ ನಿವಾಸದ ವಿಳಾಸ ನೀಡಿದ್ದು, ಕೋರ್ಟ್ ಸಮನ್ಸ್ ಜಾರಿ ಮಾಡಿದೆ