ಸಿಎಂ ಸ್ಥಾನದಿಂದ ಕೆಳಗಿಳಿಯುತ್ತಿದ್ದಂತೆ ಮಾಜಿ ಸಿಎಂಗೆ ಕಾನೂನು ಸಂಕಷ್ಟ ಎದುರಾಗಿದೆ. ಕಳೆದ 25 ವರ್ಷಗಳ ಹಳೆಯ ಪ್ರಕರಣಕ್ಕೆ ಈಗ ಮರುಜೀವ ಬಂದಿದ್ದು,  ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್​ಐಆರ್​ ದಾಖಲಿಸಲು ಕೋರ್ಟ್​ ಆದೇಶ ನೀಡಿದೆ. 

ಮೈಸೂರು  : ಸಿಎಂ ಸ್ಥಾನದಿಂದ ಕೆಳಗಿಳಿಯುತ್ತಿದ್ದಂತೆ ಮಾಜಿ ಸಿಎಂಗೆ ಕಾನೂನು ಸಂಕಷ್ಟ ಎದುರಾಗಿದೆ. ಕಳೆದ 25 ವರ್ಷಗಳ ಹಳೆಯ ಪ್ರಕರಣಕ್ಕೆ ಈಗ ಮರುಜೀವ ಬಂದಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್​ಐಆರ್​ ದಾಖಲಿಸಲು ಕೋರ್ಟ್​ ಆದೇಶ ನೀಡಿದೆ. 

ವಿಜಯನಗರ 2ನೇ ಹಂತದಲ್ಲಿ ಅಕ್ರಮವಾಗಿ ನಿವೇಶನ ಪಡೆದಿದ್ದು, ನಗರಾಭಿವೃದ್ಧಿ ಪ್ರಾಧಿಕಾರದ ಕಾಯಿದೆ ಉಲ್ಲಂಘಿಸಿ ಪಂಚಾ ಯಿತಿಯಲ್ಲಿ ವ್ಯವಹಾರ ನಡೆಸಿದ್ದ ಆರೋಪ ಎದುರಾಗಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಭೂ ಅಕ್ರಮ ನಡೆದಿದ್ದು, ಸಿಎಂ ಆಗಿದ್ದ ವೇಳೆ ಆಪ್ತರಿಗೆ ಮತ್ತೆ ನಿವೇಶನ ಮಂಜೂರು ಮಾಡಿದ್ದರು. 

ಈ ನಿಟ್ಟಿನಲ್ಲಿ ಇದೀಗ ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ ನಾಲ್ಕು ಜನರ ವಿರುದ್ಧ 9 ಕ್ರಿಮಿನಲ್ ಸೆಕ್ಷನ್​ಗಳಡಿ ಕೇಸ್​ ದಾಖಲಿಸಲು ಮೈಸೂರಿನ 2ನೇ ಪ್ರಧಾನ ಸತ್ರ ನ್ಯಾಯಾಲಯದಿಂದ ಆದೇಶ ನೀಡಲಾಗಿದ್ದು, ಲಕ್ಷ್ಮೀಪುರಂ ಪೊಲೀಸ್​ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಲಾಗುತ್ತದೆ.