ಬೆಂಗಳೂರು(ಅ.6): ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಸಿ.ಟಿ ರವಿ ವಿರುದ್ಧ  ಎಸಿಬಿ ತನಿಖೆ ನಡೆಸುವಂತೆ ಲೋಕಾಯುಕ್ತ ಕೋರ್ಟ್ ಆದೇಶೀಸಿದೆ. ತನಿಖೆ ನಡೆಸಿ ವರದಿ ನೀಡುವಂತೆ ಎಸಿಬಿ ಅಧಿಕಾರಿಗಳಿಗೆ ಕೋರ್ಟ್ ಆದೇಶ ನೀಡಿದೆ.

2004 ರಿಂದ 2010 ರ ವರೆಗೆ 3.18 ಕೋಟಿ ಆಸ್ತಿ ಗಳಿಸಿದ್ದು, ದಾಖಲೆಗಳಲ್ಲಿ 49 ಲಕ್ಷ ಎಂದು ವಿವರ ಸಲ್ಲಿಸಿದ್ದರು ಎಂದು ಆರೋಪಿಸಿ  2012ರಲ್ಲಿ ಎ.ಸಿ. ಕುಮಾರ್​ ಎಂಬುವರು ಲೋಕಾಯುಕ್ತ ಕೋರ್ಟ್'ನಲ್ಲಿ  ಪ್ರಕರಣ ದಾಖಲಿಸಿ ಖಾಸಗಿ ದೂರು ನೀಡಿದ್ದರು. ಇಂದು ವಿಚಾರಣೆ ನಡೆಸಿ ತನಿಖೆ ನಡೆಸುವಂತೆ ಲೋಕಾ ಕೋರ್ಟ್ ಆದೇಶ ನೀಡಿದೆ.