ಸೆಕ್ಸ್’ನಲ್ಲಿ ತೃಪ್ತಿಹೊಂದಿರುವವರು ‘ಈ’ ಕೆಲಸ ಮಾಡುವ ಸಾಧ್ಯತೆ ಹೆಚ್ಚಂತೆ!!!

First Published 19, Feb 2018, 9:23 PM IST
Couples who have good sex are more likely to cheat Says study
Highlights

ಲೈಂಗಿಕ ಜೀವನ ‘ಸಂತೋಷ’ದಾಯಕವಾಗಿದ್ದರೆ ವೈವಾಹಿಕ ಜೀವನವೂ ಚೆನ್ನಾಗಿರುತ್ತೆ ಎಂದು ನೀವು ಭಾವಿಸಿದ್ದೀರಾ? ಹಾಗಾದರೆ ನಿಮ್ಮ ಅನಿಸಿಕೆ ತಪ್ಪಾಗಿರಲೂಬಹುದು.

ಲೈಂಗಿಕ ಜೀವನ ‘ಸಂತೋಷ’ದಾಯಕವಾಗಿದ್ದರೆ ನಿಮ್ಮ ಸಂಗಾತಿ ನಿಮಗೆ ಮೋಸ ಮಾಡಲ್ಲ ಎಂದು ನೀವು ಭಾವಿಸಿದ್ದೀರಾ? ಹಾಗಾದರೆ ನಿಮ್ಮ ಅನಿಸಿಕೆ ತಪ್ಪಾಗಿರಲೂಬಹುದು.

ಏಕೆಂದರೆ ಫ್ಲೋರಿಡಾ ಸ್ಟೇಟ್ ಯೂನಿವರ್ಸಿಟಿಯ ಹೊಸ ಸಂಶೋಧನೆಯೊಂದರ ಪ್ರಕಾರ ಬೇರೆಯೇ ವಿಷಯ ಬಹಿರಂಗಪಡಿಸಿದೆ.

ದಂಪತಿ ಮಧ್ಯೆ ಲೈಂಗಿಕ ಸಂಬಂಧ ತೃಪ್ತಿಕರವಾಗಿಲ್ಲದಿದ್ದರೆ, ಸಂಗಾತಿಯು ದಾರಿತಪ್ಪುವ ಸಾಧ್ಯತೆಗಳಿರುತ್ತವೆ ಎಂದು ಸಾಮಾನ್ಯವಾಗಿ ಭಾವಿಸಲಾಗುತ್ತದೆ. ಆದರೆ  ಹೊಸ ಸಂಶೋಧನೆ ಪ್ರಕಾರ ಯಾರ ಮಧ್ಯೆ ಲೈಂಗಿಕ ಸಂಬಂಧ ತೃಪ್ತಿಕರವಾಗಿರುತ್ತದೋ ಅಂಥವರೇ ತನ್ನ ಸಂಗಾತಿಗೆ ಮೋಸ ಮಾಡುವ ಸಾಧ್ಯತೆಗಳಿರುತ್ತವೆ ಎಂದು ಹೇಳಲಾಗಿದೆ.

ಸಂಶೋಧನಕಾರರು 233 ನವದಂಪತಿಗಳ ಲೈಂಗಿಕ ಚಟುವಟಿಕೆ, ಸಂತೃಪ್ತಿ ಮಟ್ಟ, ಬದ್ಧತೆ ಹಾಗೂ ವಿಶ್ವಾಸಾರ್ಹತೆ ಮುಂತಾದ ಅಂಶಗಳನ್ನು  ಸುಮಾರು ಮೂರುವರೆ ವರ್ಷಗಳ ಕಾಲ ಅಧ್ಯಯನ ಮಾಡಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಜೊತೆಗೆ ಆ ದಂಪತಿಗಳಿಗೆ, ಇನ್ನೋರ್ವ ಆಕರ್ಷಕ ಪುರುಷ/ಮಹಿಳೆಯ  ಫೋಟೋ ತೋರಿಸಲಾಗಿತ್ತು. ಯಾರು ಆ ಪೋಟೋವನ್ನು ಕಡಿಮೆ ಕಾಲ ದಿಟ್ಟಿಸಿದರೋ, ಅಂಥವರು ತಮ್ಮ ಸಂಗಾತಿಯನ್ನು ವಂಚಿಸುವ ಸಾಧ್ಯತೆ  ಕಡಿಮೆಯಿದೆ ಎಂದು ಅಧ್ಯಯನವು ತಿಳಿಸಿದೆ.

loader