ಲಿವ್ ಇನ್ ಸಂಬಂಧದಲ್ಲಿರುವ ದಂಪತಿ, ಮಕ್ಕಳನ್ನು ದತ್ತು ಪಡೆದುಕೊಳ್ಳುವಂತಿಲ್ಲ ಎಂದು ಕೇಂದ್ರೀಯ ದತ್ತು ಸಂಪನ್ಮೂಲ ಪ್ರಾಧಿಕಾರ (ಕಾರಾ) ಸ್ಪಷ್ಟಪಡಿಸಿದೆ.
ನವದೆಹಲಿ: ಲಿವ್ ಇನ್ ಸಂಬಂಧದಲ್ಲಿರುವ ದಂಪತಿ, ಮಕ್ಕಳನ್ನು ದತ್ತು ಪಡೆದುಕೊಳ್ಳುವಂತಿಲ್ಲ ಎಂದು ಕೇಂದ್ರೀಯ ದತ್ತು ಸಂಪನ್ಮೂಲ ಪ್ರಾಧಿಕಾರ (ಕಾರಾ) ಸ್ಪಷ್ಟಪಡಿಸಿದೆ.
ವಿವಾಹವಾಗದೇ, ಜೊತೆಗಿರುವ ಸಂಬಂಧ ಸ್ಥಿರವಲ್ಲ ಎಂಬ ಕಾರಣಕ್ಕೆ ಈ ನಿಯಮ ರೂಪಿಸಲಾಗಿದೆ ಎಂದು ಕಳೆದ ವಾರ ಹೊರಡಿಸಿದ ಸುತ್ತೋಲೆಯಲ್ಲಿ ಕಾರಾ ಸ್ಪಷ್ಟಪಡಿಸಿದೆ. ಈ ನಡುವೆ ಏಕಾಂಗಿಯಾಗಿರುವ ಅವಿವಾಹಿತ ಮಹಿಳೆ ಯಾವುದೇ ಲಿಂಗದ ಮಗುವನ್ನು ದತ್ತು ಪಡೆಯುವ ಅವಕಾಶ ಇದೆ.
ಆದರೆ ಏಕಾಂಗಿಯಾಗಿರುವ ಪುರುಷ ಗಂಡು ಮಗುವನ್ನು ಮಾತ್ರ ದತ್ತು ಪಡೆಯಬಹುದು ಎಂದು ಅದು ಹೇಳಿದೆ. ವಿಶೇಷವೆಂದರೆ ಕೆಲ ತಿಂಗಳ ಹಿಂದಷ್ಟೇ ಲಿವ್‌ಇನ್ ಸಂಬಂಧ ಅಪರಾಧವಲ್ಲ. ವಯಸ್ಕರು ಲಿವ್ ಇನ್ ಸಂಬಂಧದಲ್ಲಿ ಇರುವುದನ್ನು ಯಾರೂ ಪ್ರಶ್ನಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿತ್ತು.

Last Updated 16, Jun 2018, 9:22 AM IST