ಈ ಸೆಕ್ಸ್ ಸೀಕ್ರೆಟ್'ಗಳು ಹುಡುಗಿಯರಿಗೆ ಗೊತ್ತಿರಲೇಬೇಕು, ಇಲ್ಲದಿದ್ದರೆ ಕಷ್ಟ

First Published 23, Apr 2018, 11:03 PM IST
Couple Sex Secrets and Life
Highlights

ವಾಸ್ತವದಲ್ಲಿ ಆತ ಲೈಂಗಿಕವಾಗಿ ದುರ್ಬಲನಾಗಿದ್ದರೆ ಸಂಪೂರ್ಣ ಕುಗ್ಗಿಹೋಗುತ್ತಾನೆ. ಹುಡುಗಿಯರು ಆತನ ವೈಫಲ್ಯವನ್ನಿಟ್ಟುಕೊಂಡು ಮೂಗು ಮುರಿದರೆ ಆತನ ಕಥೆ ಮುಗಿಯಿತೆಂದೇ. ಆದ್ದರಿಂದ, ಹುಡುಗಿಯರು ಇಂಥ ಸಂದರ್ಭದಲ್ಲಿ ಏನೂ ಆಗಿಯೇ ಇಲ್ಲವೆಂಬಂತೆ ಇದ್ದರೆ ಹುಡುಗರ ಉತ್ಸಾಹ ಕುಗ್ಗುವುದು ತಪ್ಪುತ್ತದೆ.

ಸೆಕ್ಸ್ ವಿಚಾರದಲ್ಲಿ ಹುಡುಗನ ಚಿಂತನೆಯೇ ಬೇರೆ, ಹುಡುಗಿಯರ ಅಭಿಲಾಷೆಗಳೇ ಬೇರೆ ಇರುತ್ತವೆ. ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿಡಲಾಗುವುದಿಲ್ಲ. ಪರಸ್ಪರ ಅರ್ಥ ಮಾಡಿಕೊಂಡು ಹೋಗುವುದು ಮುಖ್ಯ. ಈ ಹಿನ್ನೆಲೆಯಲ್ಲಿ ಹುಡುಗರ ಮನಸ್ಥಿತಿಯನ್ನ ಅರಿತು ಅವರೊಂದಿಗೆ ಸಾಗಲು ಹುಡುಗಿಯರಿಗೆ ಒಂದಷ್ಟು ಟಿಪ್ಸ್ ಇಲ್ಲಿವೆ.

1) ಹುಡುಗರಿಗೆ ಹೀಗಳಿಕೆಯ ಭಯ ಇರುತ್ತೆ

ಹುಡುಗರಿಗೆ ಸೆಕ್ಸ್ ವಿಷಯದಲ್ಲಿ ಸಿಕ್ಕಾಪಟ್ಟೆ ಇಗೋ ಇರುತ್ತದೆ. ತಾನು ಲೈಂಗಿಕ ಸಂಭೋಗದಲ್ಲಿ ಸೂಪರ್'ಮ್ಯಾನ್ ಎಂದು ಪ್ರತಿಯೊಬ್ಬ ಅಂದುಕೊಳ್ಳುತ್ತಾನೆ. ವಾಸ್ತವದಲ್ಲಿ ಆತ ಲೈಂಗಿಕವಾಗಿ ದುರ್ಬಲನಾಗಿದ್ದರೆ ಸಂಪೂರ್ಣ ಕುಗ್ಗಿಹೋಗುತ್ತಾನೆ. ಹುಡುಗಿಯರು ಆತನ ವೈಫಲ್ಯವನ್ನಿಟ್ಟುಕೊಂಡು ಮೂಗು ಮುರಿದರೆ ಆತನ ಕಥೆ ಮುಗಿಯಿತೆಂದೇ. ಆದ್ದರಿಂದ, ಹುಡುಗಿಯರು ಇಂಥ ಸಂದರ್ಭದಲ್ಲಿ ಏನೂ ಆಗಿಯೇ ಇಲ್ಲವೆಂಬಂತೆ ಇದ್ದರೆ ಹುಡುಗರ ಉತ್ಸಾಹ ಕುಗ್ಗುವುದು ತಪ್ಪುತ್ತದೆ.

2) ಸೆಕ್ಸ್ ನಂತರ ಖುಷಿ ವ್ಯಕ್ತಪಡಿಸಿ

ಸೆಕ್ಸ್ ಮಾಡಿದ ಬಳಿಕ ಹುಡುಗರಿಗೆ ಏನೋ ಸಾಧಿಸಿದ ಖುಷಿ ಇರುತ್ತದೆ. ತನ್ನಿಂದ ತುಂಬಾ ತೃಪ್ತಿ ಸಿಕ್ಕಿತು ಎಂದು ಹುಡುಗಿಯರ ಬಾಯಲ್ಲೇ ಕೇಳಲು ಇಷ್ಟಪಡುತ್ತಾರೆ. ನಿಮಗೆ ಆತನಿಂದ ಎಷ್ಟಾದರೂ ಸುಖ ಸಿಗಲಿ, ನೀವು ಮಾತ್ರ ತೃಪ್ತಿ ಆಯಿತೆಂದು ಹೇಳುವುದು ಒಳಿತು. ಇದರಿಂದ ಹುಡುಗನ ಮನಸು ಹಗುರವಾಗುತ್ತದೆ.

3) ಸೆಕ್ಸ್ ವಿಷಯದಲ್ಲಿ ಹುಡುಗರು ಫಸ್ಟ್ ಇರುತ್ತಾರೆ

ರಿಲೇಶನ್'ಶಿಪ್'ನಲ್ಲಿ ಸಾಮಾನ್ಯವಾಗಿ ಹುಡುಗ ತನ್ನ ಸಂಗಾತಿಯೊಂದಿಗೆ ಸದಾ ಸೆಕ್ಸ್ ಬಯಸುತ್ತಾನೆ. ಹುಡುಗನಿಗೆ ಲೈಂಗಿಕ ಸಂಬಂಧದಲ್ಲಿ ಆಸಕ್ತಿ ಇಲ್ಲ ಎಂದು ಹುಡುಗಿಯರು ಭಾವಿಸಿದರೆ ಅದು ತಪ್ಪು. ಹೀಗಾಗಿ, ಹುಡುಗಿ ಯಾವುದೇ ಮುಲಾಜಿಲ್ಲದೇ ಹುಡುಗನಿಗೆ ಸೆಕ್ಸ್'ಗೆ ಪ್ರೊಪೋಸ್ ಮಾಡಬಹುದು. ತನ್ನನ್ನ ಹುಡುಗಿ ಲೈಂಗಿಕವಾಗಿ ಇಷ್ಟಪಡುತ್ತಾಳೆ ಎಂಬ ವಿಷಯ ತಿಳಿದರೆ ಹುಡುಗನ ಖುಷಿ ಇಮ್ಮಡಿಗೊಳ್ಳುತ್ತದೆ.

4) ಪುರುಷರಿಗೂ ತಮ್ಮ ದೇಹದ ಬಗ್ಗೆ ಕಾಳಜಿ ಇರುತ್ತೆ

ಹುಡುಗಿ ತನ್ನ ದಪ್ಪ ದೇಹವನ್ನೋ, ಬಾಲ್ಡಿ ತಲೆಯನ್ನೋ ನೋಡಿ ಎಲ್ಲಿ ಇಷ್ಟಪಡುವುದಿಲ್ಲವೋ ಎಂಬ ಆತಂಕ ಎಲ್ಲ ಹುಡುಗರಲ್ಲೂ ಇರುತ್ತದೆ. ಬೆಡ್'ರೂಮಲ್ಲೂ ಅವರು ಇದೇ ಯೋಚನೆಯಲ್ಲಿರುತ್ತಾರೆ. ಅಂಥ ಸಂದರ್ಭದಲ್ಲಿ, ಹುಡುಗ ಹೇಗೇ ಇದ್ದರೂ ನನಗೆ ನೀನೇ ಚಂದ ಎಂದು ಹುಡುಗಿ ಹೇಳಿದ್ದೇ ಆದಲ್ಲಿ ಆತನ ಸಂತಸಕ್ಕೆ ಪಾರವೇ ಇಲ್ಲದಂತಾಗುತ್ತದೆ. ಯಾವುದೇ ಸಂಕೋಚವಿಲ್ಲದೇ ನಿಮಗೆ ಸುಖ ಕೊಡಲು ಮುಂದಾಗುತ್ತಾನೆ.

5) ಅನೈತಿಕ ಸಂಬಂಧದಿಂದ ಸುಖ ಹಾಳು

ಅನೈತಿಕ ಲೈಂಗಿಕ ಸಂಬಂಧದ ವಿಷಯದಲ್ಲಿ ಹುಡುಗರು ಮತ್ತು ಹುಡುಗರ ನಡುವೆ ಒಂದು ಮುಖ್ಯ ವ್ಯತ್ಯಾಸವಿದೆ. ತನ್ನ ಸಂಗಾತಿ ಬೇರೊಬ್ಬಾಕೆಯೊಂದಿಗೆ ಲೈಂಗಿಕ ಸಂಬಂಧ ಇಟ್ಟುಕೊಂಡಿದ್ದು ಗೊತ್ತಾದರೆ ಹುಡುಗಿ ಸ್ವಲ್ಪ ಸಿಟ್ಟಾಗಬಹುದು. ಆದರೆ, ಅದೇ ತನ್ನ ಹುಡುಗಿ ಬೇರೊಬ್ಬ ಪುರುಷನೊಡನೆ ಸೆಕ್ಸ್ ಸಂಬಂಧ ಇಟ್ಟುಕೊಂಡರೆ ಹುಡುಗನಿಗೆ ಜೀರ್ಣಿಸಿಕೊಳ್ಳಲು ಸಾಧ್ಯವೇ ಇಲ್ಲ. ಹುಡುಗಿ ತನ್ನೊಂದಿಗೆ ಭದ್ರವಾಗಿದ್ದಾಳೆ ಎಂಬ ಭಾವನೆ ಆತನಿಗೆ ಬಂದರೆ ನಿಮಗೋಸ್ಕರ ಏನು ಬೇಕಾದರೂ ಮಾಡಲು ಸಿದ್ಧನಿರುತ್ತಾನೆ.

loader