ಕೈರೋ, [ಡಿ.09]: ಡ್ಯಾನಿಷ್ ಮೂಲದ ಜೋಡಿಯೊಂದು ಈಜಿಪ್ಟ್ ನ ವಿಶ್ವ ಪ್ರಸಿದ್ಧ ಗೀಝಾ ಕುಫು ಪಿರಮಿಡ್ ಮೇಲೆ ಬಟ್ಟೆ ಬಿಚ್ಚಿ ಬೆತ್ತಲಾಗಿ ಮಲಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಪಿರಮಿಡ್ ಮೇಲೆ ಡ್ಯಾನಿಷ್ ಜೋಡಿ ಮೂರು ನಿಮಿಷಗಳ ಕಾಲ ಬಟ್ಟೆ ಬಿಚ್ಚಿ ಸೆಕ್ಸ್ ಮಾಡಿದ್ದು, ಈ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಲಾಗಿದೆ. 

ವಿಶ್ವ ಪ್ರಸಿದ್ಧ ಪಿರಮಿಡ್ ಅನ್ನು ಅಸಭ್ಯವಾಗಿ ಬಳಸಿಕೊಂಡಿದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಈಜಿಪ್ಟ್ ತನಿಖೆಗೆ ಆದೇಶಿಸಿದೆ. 

ಇನ್ನು ಅಲ್ಲಿನ ಪುರಾತತ್ವ ಇಲಾಖಾ ಸಚಿವ ಖಲೀದ್ ಅಲ್ ಅನಾನಿ ಈ ಕುರಿತು ತನಿಖೆಗೆ ಆದೇಶಿಸಿದ್ದು, ಆ ಜೋಡಿಯನ್ನು ಶೀಘ್ರವೇ ಪತ್ತೆ ಮಾಡಿ ಶಿಕ್ಷಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.