ನಮ್ಮ ಸರ್ಕಾರಿ ಅಧಿಕಾರಿಗಳಿಗೆ ಎಷ್ಟು ಬಿಸಿ ಮುಟ್ಟಿಸಿದ್ರೂ ಎಚ್ಚೆತ್ತುಕೊಳ್ತಿಲ್ಲ. ಸಚಿವಾಲಯ ಲಕ್ಷಾಂತರ ಕಡತಗಳಿಗೆ ಮುಕ್ತಿಯೇ ಸಿಗ್ತಿಲ್ಲ. ನಮ್ ಸಚಿವರು, ಅಧಿಕಾರಿಗಳು ನಯಾ ಪೈಸೆ  ಕಿಮ್ಮತ್ತು ನೀಡುತ್ತಿಲ್ಲ. ಏಪ್ರಿಲ್​ 1ರಿಂದ ನವೆಂಬರ್​ 30ರವರೆಗೆ ವಿಲೇವಾರಿ ಆಗ್ದೇ ಬಾಕಿ ಉಳಿದಿರೋ ಕಡತಗಳ ಸಂಖ್ಯೆ ತಿಳಿದರೆ ದಂಗಾಗುತ್ತದೆ..

ಬೆಂಗಳೂರು(ಟಿ.10): ನಮ್ಮ ಸರ್ಕಾರಿ ಅಧಿಕಾರಿಗಳಿಗೆ ಎಷ್ಟು ಬಿಸಿ ಮುಟ್ಟಿಸಿದ್ರೂ ಎಚ್ಚೆತ್ತುಕೊಳ್ತಿಲ್ಲ. ಸಚಿವಾಲಯ ಲಕ್ಷಾಂತರ ಕಡತಗಳಿಗೆ ಮುಕ್ತಿಯೇ ಸಿಗ್ತಿಲ್ಲ. ನಮ್ ಸಚಿವರು, ಅಧಿಕಾರಿಗಳು ನಯಾ ಪೈಸೆ ಕಿಮ್ಮತ್ತು ನೀಡುತ್ತಿಲ್ಲ. ಏಪ್ರಿಲ್​ 1ರಿಂದ ನವೆಂಬರ್​ 30ರವರೆಗೆ ವಿಲೇವಾರಿ ಆಗ್ದೇ ಬಾಕಿ ಉಳಿದಿರೋ ಕಡತಗಳ ಸಂಖ್ಯೆ ತಿಳಿದರೆ ದಂಗಾಗುತ್ತದೆ..

ನಮ್ಮ ಮುಖ್ಯಮಂತ್ರಿ ಸೇರಿದಂತೆ ಸಚಿವರು, ಅಧಿಕಾರಿಗಳು ಏನು ಕೆಲಸ ಮಾಡುತ್ತಿದ್ದಾರೋ ಗೊತ್ತಿಲ್ಲ. ವಿವಿಧ ಇಲಾಖೆಗಳ ಲಕ್ಷಾಂತರ ವಿಲೇವಾರಿಗಳು ಮುಕ್ತಿ ಕಾಣದೆ ಧೂಳು ಹಿಡಿದಿವೆ. 1 ಲಕ್ಷದ 13 ಸಾವಿರದ ಆರು ನೂರ ತೊಂಭತ್ತೊಂದು ಕಡತಗಳು ಬಾಕಿಯಿದೆ. ಇಲಾಖಾ ಮುಖ್ಯಸ್ಥರ ಕಾರ್ಯವೈಖರಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಡತಗಳಿಗೆ ಮುಕ್ತಿ ಭಾಗ್ಯ ಯಾವಾಗ?: ವಿಲೇವಾರಿಯಾಗಿಲ್ಲ ಕಡತಗಳು- ಏಪ್ರಿಲ್​ 1ರಿಂದ ನವೆಂಬರ್​ 30ರ ಅಂತ್ಯಕ್ಕೆ

1. ಕಡತಗಳನ್ನು ಬಾಕಿ ಉಳಿಸಿಕೊಂಡಿರುವ ಇಲಾಖೆಯಲ್ಲಿ ಕಂದಾಯ ಇಲಾಖೆಗೆ ಮೊದಲ ಱಂಕ್. ಕಾಗೋಡು ತಿಮ್ಮಪ್ಪ ಕಂದಾಯ ಸಚಿವರಾದ್ಮೇಲೂ ಅಧಿಕಾರಿಗಳು ಎಚ್ಚೆತ್ಕೊಂಡಿಲ್ಲ. ಇಲಾಖೆಯಲ್ಲಿ ಬಾಕಿಯಿರೋ ಕಡತಗಳ ಸಂಖ್ಯೆ 14,144. ಅದ್ಯಾವಾ ಕಡತ ವಿಲೇವಾರಿ ಆಗುತ್ತೋ ಕಾಗೋಡು ತಿಮ್ಮಪ್ಪನವರೇ ಉತ್ತರಿಸಬೇಕು.

2. ಸಿಎಂ ಸಿದ್ದರಾಮಯ್ಯ ಅಧೀನದಲ್ಲಿ ಬರುವ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯಲ್ಲೂ ಕೂಡ 14.012 ಕಡತಗಳಿಗೆ ಮುಕ್ತಿ ಸಿಗಬೇಕಿದೆ.

3. ತನ್ವೀರ್ ಸೇಠ್ ನೇತೃತ್ವದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆಯಲ್ಲೂ ಸಾವಿರಾರು ಕಡತಗಳು ವಿಲೇವಾರಿಯಾಗಿಲ್ಲ. ಸುಮಾರು 9, 304 ಫೈಲ್ ಗಳಿಗೆ ಈವರೆಗೂ ಮುಕ್ತಿಯೇ ದೊರೆತಿಲ್ಲ.

4. ಇತ್ತ ನಗರಾಭಿವೃದ್ದಿ ಇಲಾಖೆಯಲ್ಲೂ ಕಡತಗಳು ವಿಲೇವಾರಿಯಾಗದೆ ಧೂಳಿಡಿದಿವೆ. ರೋಷನ್ ಬೇಗ್ ಮೂಗಿನಡಿ 7, 951 ಫೈಲ್ ಗಳು ವಿಲೇವಾರಿ ಕಂಡಿಲ್ಲ.

5. ಇನ್ನೂ ಗೃಹ ಸಚಿವ ಪರಮೇಶ್ವರ್ ಅವರ ಇಲಾಖೆಯಲ್ಲೂ ಇದೇ ಗೋಳು. ಸುಮಾರು 7. 667 ಫೈಲ್ ಗಳು ಈವರೆಗೂ ಹೊರ ಬಂದಿಲ್ಲ. ಅಧಿಕಾರಿಗಳು ನಿತ್ಯಅದೇನ್ ಕೆಲಸ ಮಾಡುತ್ತಾರೋ... ಕಡತ ವಿಲೇವಾರಿಗೆ ಅದ್ಯಾಕೇ ಇಂತಹ ನಿರ್ಲಕ್ಷ್ಯ ಅಂತಲೇ ಗೊತ್ತಾಗ್ತಿಲ್ಲ.

ಇಲಾಖೆಬಾಕಿ ಉಳಿದಿರುವ ಫೈಲ್

ವಾಣಿಜ್ಯ,ಕೈಗಾರಿಕೆ 5,892

ಉನ್ನತ ಶಿಕ್ಷಣ 3,901

ಹಣಕಾಸು 3,469

ಅರಣ್ಯ 3,092

ಜಲ ಸಂಪನ್ಮೂಲ 2,530

ಪಂಚಾಯತ್‌ರಾಜ್​​ 2,536

ಕಾರ್ಮಿಕ 2,680

ಆರೋಗ್ಯ 2,698

ಸಮಾಜ ಕಲ್ಯಾಣ 2,668

ತೋಟಗಾರಿಕೆ 2,221

ಹೀಗೆ ಸಚಿವಾಲಯದ ಹಲವು ಇಲಾಖೆಗಳಲ್ಲಿನ ಲಕ್ಷಾಂತರ ಕಡತಗಳಿಗೆ ಮುಕ್ತಿಯೇ ಸಿಕ್ಕಿಲ್ಲ.

ರಜೆ ದಿನ ಭಾನುವಾರವೂ ಕೂಡ ಕಾರ್ಯ ನಿರ್ವಹಿಸಿ ಬಾಕಿ ಉಳಿದಿರುವ ಕಡತಗಳನ್ನು ವಿಲೇವಾರಿ ಮಾಡಲು ಈ ಹಿಂದಿನ ಮುಖ್ಯ ಕಾರ್ಯದರ್ಶಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೂ ಪ್ರಯೋಜನ ಆಗಿಲ್ಲ. ಅದೇನೆ ಇರಲಿ, ಇನ್ನಾದರೂ ನಮ್ಮ ಅಧಿಕಾರಿಗಳು ಕಡತಗಳಿಿಗೆ ಮುಕ್ತಿ ನೀಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಾಗಿದೆ.