ನವದೆಹಲಿ: ಈಶಾನ್ಯ ರಾಜ್ಯಗಳಾದ ತ್ರಿಪುರಾ, ನಾಗಾಲ್ಯಾಂಡ್ ಹಾಗೂ ಮೇಘಾಲಯದಲ್ಲಿ ಮತ ಎಣಿಕೆ ಮುಂದುವರಿದಿದ್ದು, ಬಿಜೆಪಿ ತನ್ನ ಪ್ರಭಾವವನ್ನು ಈ ರಾಜ್ಯಗಳಲ್ಲಿ ಬೀರುವಲ್ಲಿಯೂ ಯಶಸ್ವಿಯಾಗಿದೆ. ಈಶಾನ್ಯ ಭಾಗದಲ್ಲಿಯೂ ಪಕ್ಷ ತನ್ನ ಛಾಪು ಮೂಡಿಸಿದೆ. ಮೇಘಾಲಯದಲ್ಲಿ ಕಾಂಗ್ರೆಸ್ ಮುಖಭಂಗ ಅನುಭವಿಸಿದ್ದು, ಕಾಂಗ್ರೆಸ್ ಮುಕ್ತ ಭಾರತದ ಬಿಜೆಪಿ ಪ್ರತಿಜ್ಞೆಗೆ ಅಪಾರ ಜಯ ಸಿಕ್ಕಂತಾಗಿದೆ.

ಕಳೆದ ಚುನಾವಣೆಯಲ್ಲಿ ಮೇಘಾಲಯ ಮತ್ತು ತ್ರಿಪುರಾದಲ್ಲಿ ಶೂನ್ಯ ಸಾಧನೆ ತೋರಿದ್ದ ಕೇಸರಿ ಪಕ್ಷ, ಈ ಬಾರಿ ಭಾರಿ ಕೆಲವು ಸಾಧಿಸಿದೆ. ಅದರಲ್ಲಿಯೂ ತ್ರಿಪುರಾದಲ್ಲಿ 25 ವರ್ಷಗಳಿಂದ ಇದ್ದ, ಮಾಣಿಕ್ ಸರಕಾರ್ ನೇತೃತ್ವದ ಸಿಪಿಎಂ ಸರಕಾರವನ್ನು ಕಿತ್ತೊಗೆಯುವಲ್ಲಿ ಮೋದಿ-ಶಾ ಜೋಡಿ ಯಶಸ್ವಿಯಾಗಿದ್ದು. ಈ ಮೂರು ರಾಜ್ಯಗಳಲ್ಲಿ ಸರಕಾರ ರಚಿಸು ಬೇಕಾಗಿದ್ದು 31 ಸೀಟುಗಳು. ತ್ರಿಪುರಾದಲ್ಲಿ ಈ ಹೊತ್ತಿನ ಮಾಹಿತಿ ಪ್ರಕಾರ ಬಿಜೆಪಿ, 41 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಸ್ಪಷ್ಟ ಬಹುಮತದೊಂದಿಗೆ ಸರಕಾರ ರಚಿಸುವುದು ಖಾತ್ರಿಯಾಗಿದೆ. ಈ ರಾಜ್ಯದಲ್ಲಿ 10 ಸ್ಥಾನಗಳನ್ನು ಕಳೆದುಕೊಂಡ ಕಾಂಗ್ರೆಸ್, ಶೂನ್ಯ ಸಾಧನೆ ತೋರಿದರೆ, 48 ಸ್ಥಾನ ಗಳಿಸಿದ್ದ ಸಿಪಿಎಂ ಇದೀಗ 18 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಸಾಧಿಸುತ್ತಿದೆ.

ಮೇಘಾಲಯದಲ್ಲಿ ಕಾಂಗ್ರೆಸ್ ತುಸು ಮುನ್ನಡೆ ಸಾಧಿಸುತ್ತಿರುವುದು ಹೌದಾದರೂ, ಕಳೆದ ಬಾರಿಗೆ ಹೋಲಿಸಿದರೆ ಸ್ಥಾನಗಳನ್ನು ಕಳೆದು ಕೊಳ್ಳುವ ಸೂಚನೆ ಕಾಣಿಸುತ್ತಿದೆ.

ನಾಗಲ್ಯಾಂಡ್‌ನಲ್ಲಿ ಬಿಜೆಪಿ-ಎನ್‌ಡಿಪಿಪಿ ಮೈತ್ರಿ ಹಲವು ಕ್ಷೇತ್ರಗಳಲ್ಲಿ ಮುನ್ನಡೆ ತೋರಿದ್ದು, ಎನ್‌ಡಿಎಫ್‌ಗೆ ಪ್ರಬಲ ಪೈಪೋಟಿ ನೀಡುತ್ತಿದೆ.

ಇತ್ತೀಚಿನ ಮಾಹಿತಿಯಂತೆ, ಪಕ್ಷಗಳ ಬಲಾಬಲ ಹೀಗಿದೆ...

ಮೇಘಾಲಯ
ಕಾಂಗ್ರೆಸ್- 22 (-6)
ಯುಡಿಪಿ- 8 (-1)
ಬಿಜೆಪಿ- 4 (4)
ಎನ್‌ಪಿಪಿ- 16 (14)
ಇತರೆ- 9 (-11)

ನಾಗಲ್ಯಾಂಡ್
ಎನ್‌ಪಿಎಫ್- 23 (-13)
ಬಿಜೆಪಿ -31 (30)
ಕಾಂಗ್ರೆಸ್- 0 (-9)
ಇತರೆ - 6 (-8)

ತ್ರಿಪುರಾ
ಸಿಪಿಎಂ- 19 (-29)
ಕಾಂಗ್ರೆಸ್- 0 (-10)
ಬಿಜೆಪಿ - 40 (+40)
ಇತರೆ- 0 (-1)