ಅಮಾನತ್ತಾದ ರಾಜ್ಯ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷ ತ್ರಿಜೇಶ್'ನ ದರ್ಬಾರ್ ಯಾವ ದೇಶದ ರಾಜಕುಮಾರನಿಗೂ ಕಡಿಮೆಯಿಲ್ಲ. ಆತನ ಬಳಿಯಿರುವ ಕಾರುಗಳು ಲಕ್ಷಗಳಲ್ಲಿ ಬೆಲೆ ಬಾಳುವುದಿಲ್ಲ ಹಲವು ಕೋಟಿಗಳನ್ನೇ ಮೀರಿದ್ದು.

ಬೆಂಗಳೂರು(ಡಿ.2): ಐಟಿ ದಾಳಿ ವೇಳೆ ಕಂತೆ ಕಂತೆ 2000 ರೂಪಾಯಿ ನೋಟುಗಳು ಮತ್ತು ಕೆಜಿಗಟ್ಟಲೆ ಬಂಗಾರ ಪತ್ತೆಯಾಗಿ ಅಮಾನತ್ತಾದ ರಾಜ್ಯ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷ ತ್ರಿಜೇಶ್'ನ ದರ್ಬಾರ್ ಯಾವ ದೇಶದ ರಾಜಕುಮಾರನಿಗೂ ಕಡಿಮೆಯಿಲ್ಲ. ಆತನ ಬಳಿಯಿರುವ ಕಾರುಗಳು ಲಕ್ಷಗಳಲ್ಲಿ ಬೆಲೆ ಬಾಳುವುದಿಲ್ಲ ಹಲವು ಕೋಟಿಗಳನ್ನೇ ಮೀರಿದ್ದು. ಅಷ್ಟಕ್ಕೂ ಇವೆಲ್ಲ ಕಾರುಗಳು ಹಾಗೂ ಬೈಕ್'ಗಳು ಖರೀದಿಸಿದ್ದು ತನ್ನ ತಂದೆಯ ಹೆಸರಿನಲ್ಲಿ ಹಾಗೂ ಆತನ ಭ್ರಷ್ಟಾಚಾರದ ಹಣದಲ್ಲಿ. ತ್ರಿಜೇಶ್ ಹೆಸರಿನಲ್ಲೇ ಇರುವ 12 ಕೋಟಿ ರೂ. ಮೌಲ್ಯದ ಪೋರ್ಷ್‌ ಕಾರನ್ನು ಈಗಾಗಲೇ ವಶಪಡಿಸಿಕೊಳ್ಳಲಾಗಿದೆ.

ಆತನ ಬಳಿಯಿರುವ ಕಾರುಗಳು ಹಾಗೂ ಬೆಲೆಗಳು

ಪೋರ್ಶೆ ಕಾರು 1.45 ಕೋಟಿ ರೂ.

ಲ್ಯಾಂಬೊರ್ಗಿನಿ 8 ಕೋಟಿ ರೂ.

ದುಬಾರಿ ಬೈಕ್ 1.5 ಕೋಟಿ ರೂ.

ಕೋಟಿ ರೂಗಳ ಇನ್ನೂ ಎರಡು ಐಷಾರಾಮಿ ಕಾರುಗಳಿವೆ

ಒಟ್ಟು 20 ಕೋಟಿ ಮೌಲ್ಯದ ಕಾರು, ಬೈಕ್ ಗಳಿವೆ

ಆಸ್ತಿ

ಫೆಬೆಲ್ ಅಪಾರ್ಟ್ ಮೆಂಟ್ ನಲ್ಲಿ ಒಟ್ಟು ನಾಲ್ಕು ಫ್ಲಾಟ್ ಗಳು

ಇವು ಕೇವಲ ಮಗನ ಹೆಸರಿನಲ್ಲಿರುವ ಆಸ್ತಿಗಳು. ಪತ್ನಿ ಹಾಗೂ ಸಂಬಂಧಿಕರು, ಸ್ನೇಹಿತರ ಹೆಸರಿನಲ್ಲಿ ಹಲವು ಕೋಟಿಗಳಷ್ಟು ಆಸ್ತಿಯಿದ್ದು, ಇದನೆಲ್ಲ ಐಟಿ ಅಧಿಕಾರಿಗಳು ಪತ್ತೆ ಮಾಡುತ್ತಿದ್ದಾರೆ.