ರೈತರ ಸಾಲಮನ್ನಾದಿಂದ ಸರ್ಕಾರದ ಬೊಕ್ಕಸಕ್ಕೆ  ಹೊರೆಯಾಗಿದ್ದು, ಇದರಿಂದ ಅನೇಕರು ನೆರವಿನ ಹಸ್ತ ಚಾಚುತ್ತಿದ್ದಾರೆ. ಇದೀಗ ಕಾರ್ಪೊರೇಟರ್ ಗಳು ತಮ್ಮ ಒಂದು ತಿಂಗಳ ಸಂಭಾವನೆಯನ್ನು  ಸರ್ಕಾರಕ್ಕೆ ನೀಡಲು ನಿರ್ಧಾರ ಮಾಡಿದ್ದಾರೆ. 

ಬೆಂಗಳೂರು : ರೈತರ ಸಾಲಮನ್ನಾದಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗಿದ್ದು, ಇದರಿಂದ ಅನೇಕರು ನೆರವಿನ ಹಸ್ತ ಚಾಚುತ್ತಿದ್ದಾರೆ. ಇದೀಗ ಕಾರ್ಪೊರೇಟರ್ ಗಳು ತಮ್ಮ ಒಂದು ತಿಂಗಳ ಸಂಭಾವನೆಯನ್ನು ಸರ್ಕಾರಕ್ಕೆ ನೀಡಲು ನಿರ್ಧಾರ ಮಾಡಿದ್ದಾರೆ. 

 ರೈತರಿಂದಾಗಿಯೇ ಬೆಂಗಳೂರು ಬದುಕಿದೆ. ಹೀಗಾಗಿ ಒಟ್ಟು 198 ಕಾರ್ಪೋರೇಟರ್ ಗಳು ಒಂದು ತಿಂಗಳ ವೇತನವನ್ನು ಸಾಲಮನ್ನಾಕ್ಕಾಗಿ ನೀಡಲು ನಿರ್ಧಾರ ಮಾಡಿದ್ದಾರೆ. 

ಇನ್ನು ವೈಯಕ್ತಿಕವಾಗಿ 1 ಲಕ್ಷ ರೂಪಾಯಿ ನೀಡುವುದಾಗಿ ಪದ್ಮನಾಭ ರೆಡ್ಡಿ ಘೊಷಿಸಿದ್ದಾರೆ. ತಮ್ಮ ಎರಡು ತಿಂಗಳ ಗೌರವ ಸಂಭಾವನೆ ನೀಡಲು ಮೇಯರ್ ಸಂಪತ್ ರಾಜ್ ಕೂಡ ನಿರ್ಧಾರ ಮಾಡಿದ್ದಾರೆ. 

ಒಟ್ಟು ಕಾರ್ಪೊರೇಟರ್ ಗಳು ನೀಡುವ ಹಣವು 14.85 ಲಕ್ಷದಷ್ಟಾಗಲಿದ್ದು, ಮೇಯರ್ ಹಾಗೂ ವಿಪಕ್ಷ ನಾಯಕರು ನೀಡುವ ನೀಡುವ ಹಣ ಸೇರಿ 16 ಲಕ್ಷವನ್ನು ಸಾಲಮನ್ನಾಕ್ಕಾಗಿ ನೀಡುತ್ತಿದ್ದಾರೆ.