ವಾಟ್ಸ್'ಅಪ್'ಗಳಲ್ಲಿ ಕೆಟ್ಟ ಸಂದೇಶ ಕಳಿಸುವುದರ ಜೊತೆಗೆ ಮಂಚಕ್ಕೆ ಆಹ್ವಾನಿಸುತ್ತಿದ್ದರು.

ಬೆಂಗಳೂರು(ನ.01): ತಾವು ಜೆಡಿಎಸ್ ಮುಖಂಡರು ಎಂದು ಹೇಳಿಕೊಂಡು ಫೇಸ್'ಬುಕ್ ಹಾಗೂ ವಾಟ್ಸ್'ಪ್'ನಲ್ಲಿ ಮಹಿಳೆಯರನ್ನು ಮಂಚಕ್ಕೆ ಕರೆಯುತ್ತಿದ್ದ ಕಾಮುಕರನ್ನು ಪೊಲೀಸರು ಜೈಲಿಗಟ್ಟಿದ್ದಾರೆ.

ಸೋಮಶೇಖರ್ ಗೌಡ, ದಿನೇಶ್ ಬಂಧಿತರು. ಇವರು ಜೆಡಿಎಸ್ ಮುಖಂಡರೆಂದು ಹೇಳಿಕೊಂಡು ಫೇಸ್'ಬುಕ್ ಹಾಗೂ ವಾಟ್ಸ್'ಅಪ್'ಗಳಲ್ಲಿ ಕೆಟ್ಟ ಸಂದೇಶ ಕಳಿಸುವುದರ ಜೊತೆಗೆ ಮಂಚಕ್ಕೆ ಆಹ್ವಾನಿಸುತ್ತಿದ್ದರು. ಈ ಕಾಮುಕರಿಂದ ನೊಂದ ಮಹಿಳೆಯರು ಯಲಹಂಕ ನ್ಯೂಟೌನ್ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.